ಸಿಂಧನೂರು: ಬೈಕಿಗೆ ಟಿಪ್ಪರ್ ಢಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಸಾಸಲಮರಿ ಕ್ಯಾಂಪಿನ ಬಳಿ ಭಾನುವಾರ (ಡಿ.25 ರಂದು) ನಡೆದಿದೆ.
ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಮುದಿಯಪ್ಪ ( 45), ಹುಲಿಗೆಪ್ಪ ( 64) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ಬಗ್ಗೆ ಮಾಹಿತಿ ನೀಡಿದ ಬಳಿಕ ಎರಡು ತಾಸು ತಡವಾಗಿ ಬಂದ ಪೊಲೀಸರ ವಿರುದ್ಧ ಸ್ಥಳೀಯುರ ಕೆಲ ಕಾಲ ಪ್ರತಿಭಟನೆ ನಡೆಸಿದರು.
ರೈಲ್ವೆ ಕಾಮಗಾರಿ ಕೆಲಸಕ್ಕೆ ನಿಯೋಜಿತ ಟಿಪ್ಪರ್ ಹಾಯ್ದು ಇಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳನ್ನು ಕರೆಯಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಪಿಎಸ್ಐ ಸೌಮ್ಯ ಹಿರೇಮಠ ಅವರ ಜೊತೆ ವಾಗ್ವಾದ ನಡೆಸಿದರು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.