Advertisement

ಕೊಕ್ಕರೆ ಬೆಳ್ಳೂರಿನಲ್ಲಿ ಮತ್ತೆರಡು ಪೆಲಿಕಾನ್‌ ಸಾವು

11:59 AM Mar 11, 2018 | |

ಭಾರತೀನಗರ (ಮಂಡ್ಯ): ಇಲ್ಲಿಗೆ ಸಮೀಪದ ಕೊಕ್ಕರೆಬೆಳ್ಳೂರಿನಲ್ಲಿ ಪೆಲಿಕಾನ್‌ ಹಕ್ಕಿಗಳ ಸರಣಿ ಸಾವು ಮುಂದುವರಿದಿದ್ದು, ಮತ್ತೆರಡು ಕೊಕ್ಕರೆಗಳು ಮೃತಪಟ್ಟಿವೆ. ಇದರೊಂದಿಗೆ ಕಳೆದ ಮೂರು ತಿಂಗಳಿಂದ ಒಟ್ಟಾರೆ 43 ಪೆಲಿಕಾನ್‌ಗಳು ಮೃತಪಟ್ಟಿದಂತಾಗಿದೆ.

Advertisement

ಪ್ರಾಥಮಿಕ ವರದಿಗಳ ಪ್ರಕಾರ ಜಂತು ಹುಳುಗಳ  ಬಾಧೆಯಿಂದಾಗಿ ಕೆಲವು ಪೆಲಿಕಾನ್‌ ಹಕ್ಕಿಗಳು ಅಸುನೀಗಿವೆ. ಮತ್ತೆ ಕೆಲವು ಕಲುಷಿತ ನೀರು ಕುಡಿದು ಸಾವನ್ನಪ್ಪಿರುವುದು ದೃಢಪಟ್ಟಿತ್ತು. ಈಗ ಮತ್ತೆ ಕೊಕ್ಕರೆಗಳು ಅಸ್ವಸ್ಥವಾಗಿ ಸಾವನ್ನಪ್ಪುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇಲ್ಲಿನ ಸೂಳೆಕೆರೆ ಹಾಗೂ ಮಾದರಹಳ್ಳಿ ಕೆರೆಗಳಲ್ಲಿ ಪೆಲಿಕಾನ್‌ ಹಕ್ಕಿಗಳು ಅಸ್ವಸ್ಥಗೊಳ್ಳುವುದು ಮಾಮೂಲಿಯಾಗಿ ಬಿಟ್ಟಿದೆ. ಈಗಾಗಲೇ ಹಲವು ವಿಜ್ಞಾನಿಗಳ ತಂಡಗಳು ಹಕ್ಕಿಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಿ ವರದಿ ನೀಡಿವೆ. ಆದರೂ, ಹಕ್ಕಿಗಳ ಸಾವನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. “ಹಕ್ಕಿಗಳ ನಿರಂತರ ಸಾವು ನಮಗೆ ತುಂಬಾ ನೋವು ಉಂಟು ಮಾಡಿದೆ.

ಸಾವನ್ನು ತಡೆಗಟ್ಟಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಹೆಜ್ಜಾರ್ಲೆ ಬಳಗದ ಅಧ್ಯಕ್ಷ ಲಿಂಗೇಗೌಡ ಮನವಿ
ಮಾಡಿಕೊಂಡಿದ್ದಾರೆ. “ಮಾ.12ರಂದು ದೆಹಲಿಯ ಡಬ್ಲ್ಯೂಡಬ್ಲ್ಯೂಎಫ್ ಸೇರಿ ಬೆಂಗಳೂರು, ಉತ್ತರ ಪ್ರದೇಶ, ಕೊಯಮತ್ತೂರು, ಮುಂಬೈ, ಕೊಡಗಿನಿಂದ ತಜ್ಞರ ತಂಡವನ್ನು ಕರೆಸಿ, ಸಂಪೂರ್ಣ ಅಧ್ಯಯನ ನಡೆಸಿ, ಸಾವಿನ
ನಿಖರತೆ ತಿಳಿಯಲಾಗುವುದು’ ಎಂದು ಮೈಸೂರಿನ ವನ್ಯಜೀವಿ ವಿಭಾಗದ ಮುಖ್ಯಸ್ಥ ಏಡುಕೊಂಡಲು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next