Advertisement

ನುಸುಳಿದ ಪಾಕಿಗಳು ಫಿನಿಷ್‌: ರಾಜಸ್ಥಾನದ ಗಡಿ ಪ್ರದೇಶ ಬಾರ್ಮರ್‌ನಲ್ಲಿ ಘಟನೆ

11:57 PM May 02, 2023 | Team Udayavani |

ಹೊಸದಿಲ್ಲಿ/ಬಾರ್ಮರ್‌: ಮಾದಕ ವಸ್ತುಗಳ ಕಳ್ಳಸಾಗಣೆಯಲ್ಲಿ ನಿರತರಾಗಿ­ದ್ದರು ಎಂದು ಶಂಕಿಸಲಾಗಿರುವ ಇಬ್ಬರು ಪಾಕಿಸ್ಥಾನದ ನಸುಳುಕೋರರು ಬಿಎಸ್‌ಎಫ್ ಸಿಬಂದಿಯಿಂದ ಹತರಾಗಿದ್ದಾರೆ. ರಾಜಸ್ಥಾನಕ್ಕೆ ಹೊಂದಿಕೊಂಡಂತೆ ಇರುವ ಪಾಕಿಸ್ಥಾನ- ಭಾರತ ಅಂತಾರಾಷ್ಟ್ರೀಯ ಗಡಿ ಪ್ರದೇಶ ಬಾರ್ಮರ್‌ನಲ್ಲಿ ಸೋಮ­ವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಮಂಗಳವಾರ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಅಸುನೀಗಿದ ಕಿಡಿಗೇಡಿಗಳ ಬಳಿ ಇದ್ದ ಮೂರು ಕೆಜಿ ಹೆರಾಯ್ನ್ ಅನ್ನೂ ವಶಪಡಿಸಿಕೊಳ್ಳಲಾಗಿದೆ.

Advertisement

ಈ ಬಗ್ಗೆ ಮಾತನಾಡಿದ ಬಿಎಸ್‌ಎಫ್ ವಕ್ತಾರ “ಬಿಎಸ್‌ಎಫ್ನ 12ನೇ ಬೆಟಾಲಿ­ಯನ್‌ನ ಯೋಧರು ಗಡಿ ಪ್ರದೇಶದಲ್ಲಿ ಸಂಶಯಾಸ್ಪದ ಚಟುವಟಿಕೆಗಳ ಬಗ್ಗೆ ಗಮನಿಸಿದರು. ಕೂಡಲೇ ಅವರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಒಳ ನುಸುಳಿ ಬರದಂತೆ ಇಬ್ಬರಿಗೆ ಮುನ್ನೆಚ್ಚರಿಕೆ ನೀಡಲಾಯಿತು. ಅದನ್ನು ಲೆಕ್ಕಿಸದೆ ಅವರು ಮುಂದೊತ್ತಿ ಬರುತ್ತಿದ್ದ ವೇಳೆ, ಯೋಧರು ಅವರ ಮೇಲೆ ಗುಂಡು ಹಾರಿಸಿದರು. ಈ ಸಂದರ್ಭದಲ್ಲಿ ಇಬ್ಬರು ಅಸುನೀಗಿದರು’ ಎಂದು ವಿವರಿಸಿದರು. ರಾಜಸ್ಥಾನ ವ್ಯಾಪ್ತಿಯಲ್ಲಿ ಪಾಕಿಸ್ಥಾನದ ಜತೆಗೆ 1,037 ಕಿಮೀ ಗಡಿ ಪ್ರದೇಶ ಇದೆ.

ಮೋರ್ಟರ್‌ ಶೆಲ್‌ ವಶಕ್ಕೆ: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಗೆ ಹೊಂದಿಕೊಂಡಂತೆ ಇರುವ ಎಲ್‌ಒಸಿ ವ್ಯಾಪ್ತಿಯಲ್ಲಿ 120 ಎಂಎಂ ಮೋರ್ಟರ್‌ ಶೆಲ್‌ಗ‌ಳನ್ನು ನಾಶ ಮಾಡಲಾಗಿದೆ. ಸ್ಥಳೀಯರ ಮಾಹಿತಿ ಆಧಾರದಲ್ಲಿ ಸೇನೆಯ ಬಾಂಬ್‌ ನಿಷ್ಕ್ರಿಯ ದಳ ಅವುಗಳನ್ನು ನಿಷ್ಕ್ರಿಯಗೊಳಿಸಿತು.

Advertisement

Udayavani is now on Telegram. Click here to join our channel and stay updated with the latest news.

Next