Advertisement

ಸೋಂಕಿತರ ಚಿಕಿತ್ಸೆಗೆ ಬಳಸಿದ ರೆಮ್ ಡೆಸಿವಿರ್ ಮಾರಾಟ ಮಾಡಲು ಯತ್ನ: ಮೂವರು ಅಂದರ್

07:48 PM May 03, 2021 | Team Udayavani |

ದೇವಾಸ್ : ಕೋವಿಡ್ 19 ಸೋಂಕಿತರ ಚಿಕಿತ್ಸೆ ನೀಡಲು ಬಳಸಿದ ರೆಮ್‌ ಡೆಸಿವಿರ್ ಇಂಜೆಕ್ಶನ್ ನನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ಇಬ್ಬರು ದಾದಿಯರು ಮತ್ತು ಮೆಡಿಕಲ್  ಮಾಲೀಕರೊಬ್ಬರನ್ನು ಬಂಧಿಸಲಾಗಿದೆ ಎಂದು ಮಧ‍್ಯಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಕೋವಿಡ್ 19 ಸೋಂಕು ರಾಜ್ಯದಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರೆಮ್ ಡೆಸಿವಿರ್ ಗೆ ಬೇಡಿಕೆ ಹೆಚ್ಚಾದ ಕಾರಣದಿಂದ ಇಂತಹ ಪ್ರಕರಣಗಳು ಹೆಚ್ಚಾಗಿವೆ. ದುಬಾರಿ ಬೆಲೆಗೆ ಹಾಗೂ ಸೋಂಕಿತರಿಗೆ ಬಳಸಲಾದ ಇಂಜೆಕ್ಶನ್ ನನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯೊಂದಿಗೆ ಈ ಮೂವರನ್ನು ಬಂಧಿಸಲಾಗಿದೆ ಎಂದು ಅವರು ತಿಳಸಿದ್ದಾರೆ.

ಓದಿ : ಬುಡೋಳಿ : ಲಾರಿ-ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ, ಸವಾರ ಸ್ಥಳದಲ್ಲೇ ಸಾವು

ಇನ್ನು, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದ ಮದ‍್ಯಪ್ರದೇಶದ ಎಸ್ ಪಿ ಡಾ. ಶಿವದಯಾಳ್ ಸಿಂಗ್, ಬಂಧಿತರು 27,000 ರೂ ಗೆ ಬಳಸಿದ ರೆಮ್ ಡೆಸಿವಿರ್ ಇಂಜೆಕ್ಶನ್ ನನ್ನು ಮಾರಾಟ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.

ಬಂಧಿತರಾದ ಪೂಜಾ ಸಿಂಗ್ ಮತ್ತು ಅವರ ಸಹೋದ್ಯೋಗಿ ಅಂಕಿತ್ ಪಟೇಲ್ ಮತ್ತು ಮೆಡಿಕಲ್ ಮಾಲೀಕ ರುದ್ರ ತಿವಾರಿ ಅವರು ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶದಲ್ಲಿ ಈ ಅಕ್ರಮ ಚಟುವಿಕೆಯಲ್ಲಿ ತೊಡಗಿದ್ದಾಗ ಪೊಲೀಸರಿಗೆ ಸಿಕ್ಕಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.

Advertisement

ಇನ್ನು, ಪೊಲೀಸರು  ಬಂಧಿತೆ ಬಳಿ ಇದ್ದ ಮೂರು ರೆಮ್‌ ಡೆಸಿವಿರ್ ಬಾಟಲುಗಳು ಮತ್ತು ಕೆಲವು ಔಷಧಿಗಳನ್ನು ವಶಪಡಿಸಿಕೊಂಡಿದ್ದಾರೆ.

ಸದ್ಯ, ಬಂಧಿತರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ ಎಸ್‌ ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮಾಡಲಾಗುತ್ತಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ.

ಕೋವಿಡ್ ಸೋಂಕಿನ ಎರಡನೇ ಅಲೆಯ ಕಾರಣದಿಂದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ದೇಶಾದ್ಯಂತ ಬೇಡಿಕೆ ಗಗನಕ್ಕೇರಿರುವ ರೆಮ್‌ ಡೆಸಿವಿರ್‌ನ ಬ್ಲ್ಯಾಕ್ ಮಾರ್ಕೇಟ್ ನಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮಧ್ಯಪ್ರದೇಶ ಸರ್ಕಾರ ಪೊಲೀಸ್ ಅಧಿಕಾರಿಗಳಿಗೆ ಸಂಪೂರ್ಣ ಸಮ್ಮತಿಸಿದೆ.

ಓದಿ :  ದೆಹಲಿಗೆ ನಾಳೆ 205 ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ವರ್ಗಾವಣೆ : ರೈಲ್ವೆ ಸಚಿವಾಲಯ

Advertisement

Udayavani is now on Telegram. Click here to join our channel and stay updated with the latest news.

Next