Advertisement

ಯಲಬುರ್ಗಾದಲ್ಲಿ ಎರಡು ಹೊಸ ಜಿಪಂ ಕ್ಷೇತ್ರ

03:14 PM Mar 24, 2021 | Team Udayavani |

ಯಲಬುರ್ಗಾ: ಒಣಬೇಸಾಯ ಕ್ಷೇತ್ರ ಹೊಂದಿದ, ಬಿಸಿಲು ನಾಡು ಎಂಬ ಖ್ಯಾತಿಗೆ ಪ್ರಸಿದ್ಧಿಯಾದ ತಾಲೂಕಿನಲ್ಲಿ ಇದೀಗ ಜಿಪಂ, ತಾಪಂ ಚುನಾವಣೆಯ ಚರ್ಚೆ ಜೋರಾಗಿ ನಡೆದಿದೆ. ಜಿಪಂ, ತಾಪಂಕ್ಷೇತ್ರಗಳ ಪುನರ್‌ವಿಂಗಡನೆ ಕಾರ್ಯ ನಡೆಯುತ್ತಿದ್ದು,ತಾಲೂಕಿನಲ್ಲಿ ಎರಡು ನೂತನ ಜಿಪಂ ಕ್ಷೇತ್ರಗಳು ರಚನೆಯಾಗುವ ಸಾಧ್ಯತೆ ಇದೆ.

Advertisement

ನೂತನವಾಗಿ ಬೇವೂರು, ಬಳೂಟಗಿಗೆ ಜಿಪಂ ಕ್ಷೇತ್ರಗಳ ಕೇಂದ್ರ ಸ್ಥಾನ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ತಾಲೂಕಾಡಳಿತ ಸಲ್ಲಿಸಿರುವ ಈ ಪ್ರಸ್ತಾವನೆ ಸಿಂಧುವಾದರೆಬೇವೂರು, ಬಳೂಟಗಿ ನೂತನ ಜಿಪಂ ಕ್ಷೇತ್ರಗಳೆಂದು ಅಂತಿಮಗೊಳ್ಳಲಿದೆ.

ಬೇವೂರಿಗೆ ಒಲಿದ ಭಾಗ್ಯ: ಬೇವೂರು ಗ್ರಾಮ ಯಲಬುರ್ಗಾ ತಾಲೂಕಿನಲ್ಲೇ ದೊಡ್ಡ ಗ್ರಾಮವಾಗಿದೆ.ಪೊಲೀಸ್‌ ಠಾಣೆ, ಶಾಲೆ, ಕಾಲೇಜು, ರೈತ ಸಂಪರ್ಕಕೇಂದ್ರ, ಆರೋಗ್ಯ ಕೇಂದ್ರ ಸೇರಿದಂತೆ ಹತ್ತುಹಲವಾರು ಸೌಲಭ್ಯಗಳನ್ನು ಹೊಂದಿದೆ. ಬೇವೂರುಹಾಗೂ ಸುತ್ತಮುತ್ತಲಿನ ಜನತೆ ಬೇವೂರು ಗ್ರಾಮವನ್ನುಹೋಬಳಿ ಕೇಂದ್ರ ಮಾಡುವಂತೆ ಆಗ್ರಹಿಸಿ ಹೋರಾಟಮಾಡುತ್ತಿದ್ದಾರೆ. ಈ ಮಧ್ಯೆ ಬೇವೂರು ಜಿಪಂ ಕ್ಷೇತ್ರಕ್ಕೆಪ್ರಸ್ತಾವನೆ ಸಲ್ಲಿಸಿದ್ದು, ಆ ಭಾಗದ ಜನತೆಗೆ ಸಂತಸ ತಂದಿದೆ.

ಜಿಪಂ ಕ್ಷೇತ್ರಗಳು: ಚುನಾವಣಾ ಆಯೋಗ ಪ್ರಸ್ತಾವನೆಗೆ ಸಮ್ಮತಿ ಸೂಚಿಸಿದರೆ ಮುಧೋಳ, ಹಿರೇವಂಕಲಕುಂಟಾ,ಚಿಕ್ಕಮ್ಯಾಗೇರಿ, ಬೇವೂರು, ಬಳೂಟಗಿ ಜಿಪಂಕ್ಷೇತ್ರಗಳಾಗಲಿವೆ.

12 ತಾಪಂ ಕ್ಷೇತ್ರಗಳು: ಮುಧೋಳ, ಹಿರೇಮ್ಯಾಗೇರಿ,ಬಂಡಿ, ಬಳೂಟಗಿ, ಹಿರೇಅರಳಿಹಳ್ಳಿ,ಹಿರೇವಂಕಲಕುಂಟಾ, ಗಾಣಧಾಳ,ತಾಳಕೇರಿ, ಬೇವೂರು, ಮುರಡಿ, ಗೆದಗೇರಿ, ಚಿಕ್ಕಮ್ಯಾಗೇರಿ ಇವುಗಳು ತಾಪಂ ಕ್ಷೇತ್ರಗಳಾಗಿವೆ. ಈ ಮೊದಲಿದ್ದಕರಮುಡಿ, ಮಾಟಲದಿನ್ನಿ ತಾಪಂಕ್ಷೇತ್ರಗಳನ್ನು ಕೈಬಿಡಲಾಗಿದೆ. ಯಲಬುರ್ಗಾವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕುಕನೂರುಇದೀಗ ಹೊಸ ತಾಲೂಕಾಗಿ ಬೇರ್ಪಟ್ಟಿದ್ದರಿಂದ ಕ್ಷೇತ್ರಗಳಪುನರ್‌ ರಚನೆ ವಿಂಗಡನೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಜಿಪಂ, ತಾಪಂ ಹಾಲಿ ಇರುವ ಸದಸ್ಯರಅವಧಿ ಈ ತಿಂಗಳು ಕೊನೆಗೊಳ್ಳಲಿದೆ.ಮುಂದಿನ ತಿಂಗಳು ಚುನಾವಣೆ ಘೋಷಣೆಯಾಗಲಿದೆ.

Advertisement

ಮೀಸಲಾತಿಯಲ್ಲಿ ಪ್ರಭಾವ: ಯಲಬುರ್ಗಾ ತಾಲೂಕಿನಲ್ಲಿ ಐದು ಜಿಪಂ, 12 ತಾಪಂ ಕ್ಷೇತ್ರಗಳಿಗೆಮೀಸಲಾತಿ ನಿಗದಿಯಲ್ಲಿ ಭಾರಿ ಪ್ರಭಾವ ಬೀರುಕಾರ್ಯಗಳು ನಡೆಯುತ್ತವೆ. ಕಳೆದ ಬಾರಿ ಕ್ಷೇತ್ರ ಪುನರ್‌  ವಿಂಗಡನೆ ಹಾಗೂ ಮೀಸಲಾತಿ ನಿಗದಿ ವೇಳೆ ಬಸವರಾಜರಾಯರಡ್ಡಿ ಶಾಸಕರಾಗಿ ಸಚಿವರು ಆಗಿದ್ದರು. ಆಗ ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಇತ್ತು ಹೀಗಾಗಿಬಸವರಾಜ ರಾಯರಡ್ಡಿ ಇಚ್ಛಿಸಿದ ಕ್ಷೇತ್ರಗಳ ಪುನರವಿಂಗಡನೆ ಹಾಗೂ ಮೀಸಲಾತಿ ನಿಗದಿಯಲ್ಲಿ ವಿಶೇಷಆಸಕ್ತಿ ವಹಿಸಿದ್ದರು. ಇದೀಗ ಬಿಜೆಪಿ ಸರಕಾರವಿದ್ದುಹಾಲಪ್ಪ ಆಚಾರ್‌ ಶಾಸಕರಾಗಿದ್ದಾರೆ. ಹೀಗಾಗಿ ಈಬಾರಿ ಶಾಸಕ ಹಾಲಪ್ಪ ಆಚಾರ್‌ ಅಣತಿಯಂತೆಕ್ಷೇತ್ರಗಳ ರಚನೆ, ಮೀಸಲಾತಿ ನಿಗದಿಯಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎನ್ನಲಾಗುತ್ತದೆ.

ವಿಂಗಡನೆ ಅವೈಜ್ಞಾನಿಕ: ಹೊಸ ಕ್ಷೇತ್ರಗಳ ರಚನೆ ಕ್ಷೇತ್ರಗಳಪುನರವಿಂಗಡನೆ ಕಾರ್ಯ ಅವೈಜ್ಞಾನಿಕವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಸಂಪರ್ಕವಿಲ್ಲದಊರುಗಳನ್ನು ಸೇರ್ಪಡೆ ಮಾಡಲಾಗಿದೆ. ಬೇಕಾಬಿಟ್ಟಿಮನಸೋ ಇಚ್ಛೆ ವಿಂಗಡಿಸಲಾಗಿದೆ, ಬಳೂಟಗಿ, ಜಿಪಂ ಕ್ಷೇತ್ರಗಳಲ್ಲಿ ಗ್ರಾಮಗಳ ಸೇರ್ಪಡೆ ಅವೈಜ್ಞಾನಿಕವಾಗಿದೆಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಉದಯವಾಣಿ’ಗೆ ಲಭ್ಯವಾದ ಮಾಹಿತಿ ಪ್ರಕಾರ ಯಲಬುರ್ಗಾ ತಾಲೂಕಿನಲ್ಲಿ 5 ಜಿಪಂ ಕ್ಷೇತ್ರ ಹಾಗೂ 12 ತಾಪಂ ಕ್ಷೇತ್ರಗಳ ಪುನರ್‌ ವಿಂಗಡನೆ ಪ್ರಸ್ತಾವನೆಯನ್ನು ರಾಜ್ಯ ಚುನಾವಣೆ ಆಯೋಗಕ್ಕೆ ಕಳುಹಿಸಿದ್ದು,ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.ತಾಲೂಕಿನಿಂದ ಕಳುಹಿಸಿದ ಪ್ರಸ್ತಾವನೆಯಲ್ಲಿಕೆಲ ತಿದ್ದುಪಡಿಯಾಗವ ಸಾಧ್ಯತೆಗಳನ್ನು ಸಹ ಅಲ್ಲಗಳೆಯುವಂತಿಲ್ಲ ಎನ್ನಬಹುದು.

 

ಮಲ್ಲಪ್ಪ ಮಾಟರಂಗಿ

Advertisement

Udayavani is now on Telegram. Click here to join our channel and stay updated with the latest news.

Next