ತೆಲಂಗಾಣ : ಕೋವಿಡ್ ನಿಂದ ಮೃತ ಪಟ್ಟ ಹಿಂದೂ ವ್ಯಕ್ತಿಯ ಅಂತ್ಯ ಕ್ರಿಯೆಯನ್ನು ಮುಸ್ಲೀಂ ಸಮುದಾಯದ ಇಬ್ಬರು ಸಹೋದರರು ನಡೆಸಿಕೊಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಈ ಘಟನೆಯು ತೆಲಂಗಾಣದ ಪೆಡ್ಡಾ ಕೊಡಪಾಗಲ್ ಮಂಡಲದ ಕೇಟೆಪಲ್ಲಿ ಗ್ರಾಮದಲ್ಲಿ ಸಂಭವಿಸಿದೆ.
ಕೋವಿಡ್ ಸೋಂಕಿನಿಂದ ಮೃತ ಪಟ್ಟ ವ್ಯಕ್ತಿಯನ್ನು ಮೊಘುಲಿಯಾ ಎಂದು ಗುರುತಿಸಲಾಗಿದೆ. ಈ ವ್ಯಕ್ತಿಯು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.. ನಂತರ ಇವರಿಗೆ ಕೋವಿಡ್ ಸೋಂಕು ದೃಢ ಪಟ್ಟಿದ್ದು ಇವರುನ್ನು ಭನಸುವಾಡದ ಆಸ್ಪತ್ರೆಗೆ ಕರೆದೊಯ್ಯಲಾಗಿ ಚಿಕಿತ್ಸೆ ಕೊಡಿಸಲಾಗಿದೆ. ಆದರೂ ಕೂಡ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಮೊಘುಲಿಯಾ ಸಾವನ್ನಪ್ಪಿದ್ದಾರೆ.
ಕೋವಿಡ್ ಸೋಂಕು ತಗುಲಿ ಮೊಘುಲಿಯಾ ಸಾವನ್ನಪ್ಪಿದ್ದರಿಂದ ಕುಟುಂಬದವರು ಅವರ ಮೃತ ದೇಹವನ್ನು ಆಸ್ಪತ್ರೆಯಿಂದ ಕೊಂಡೊಯ್ಯಲು ಮತ್ತು ಅಂತಿಮ ಸಂಸ್ಕಾರ ಮಾಡಲು ಮುಂದಾಗಲಿಲ್ಲ. ಇವರು ಕೋವಿಡ್ ಗೆ ಹೆದರಿ ಅಂತ್ಯ ಸಂಸ್ಕಾರಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯ ಮೂಲಗಳು ತಿಳಿಸಿದೆ.
ಇದನ್ನು ಕಂಡ ಶಫಿ ಮತ್ತು ಅಲಿ ಎಂಬ ಇಬ್ಬರು ಮುಸಲ್ಮಾನ ಬಾಂಧವರು ಮೊಘುಲಿಯಾ ಅವರ ಮೃತ ದೇಹವನ್ನು ಭನಸುವಾಡ ಪ್ರದೇಶದಲ್ಲಿ ಹಿಂದೂ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದ್ದಾರೆ. ಶಫಿ ಮತ್ತು ಅಲಿ ಈ ಇಬ್ಬರಿಗೂ ಮತ್ತು ಮೊಘುಲಿಯಾಗು ಯಾವುದೇ ರಕ್ತ ಸಂಬಂಧ ಇಲ್ಲ. ಆದ್ರೆ ಮಾನವೀಯ ದೃಷ್ಟಿಯಿಂದ ಮಾಡಿರುವ ಈ ಕೆಲಸ ಮೆಚ್ಚುಗೆಗೆ ಕಾರಣವಾಗುತ್ತಿದೆ.
ಇವರ ಕಾರ್ಯಕ್ಕೆ ಸ್ಥಳೀಯರು ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಇಬ್ಬರು ಸಹೋದರರ ನಿಸ್ವಾರ್ಥ ಕೆಲಸವನ್ನು ಶ್ಲಾಘಿಸಿದ್ದು, ಕೋಮು ಸೌಹಾರ್ದತೆ ಮೆರೆದಿರುವ ಈ ಇಬ್ಬರು ಸಹೋದರರ ಬಗ್ಗೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.