Advertisement

Bengaluru: ನಗರದಲ್ಲಿ ಡೆಂಘೀ ರೋಗಕ್ಕೆ ಇಬ್ಬರು ಬಲಿ?

11:50 AM Jun 29, 2024 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಘೀಗೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಎರಡು ಅನುಮಾನಾಸ್ಪದ ಡೆಂಘೀ ಸಾವಾಗಿರುವುದು ಗಮನಕ್ಕೆ ಬಂದಿದೆ ಎಂದು ಪಾಲಿಕೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತರು ಹೇಳಿಕೆ ನೀಡಿರುವುದು ಆತಂಕ ತಂದಿಟ್ಟಿದೆ.

Advertisement

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಬಿಬಿಎಂಪಿಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸೂರಳ್ಕರ್‌ ವಿಕಾಸ್‌ ಕಿಶೋರ್‌, ಈ ಸಂಬಂಧ ನಿಖರವಾದ ಕಾರಣ ತಿಳಿಯುವ ಸಲುವಾಗಿ ಶನಿವಾರ ಡೆತ್‌ ಆಡಿಟ್‌ ಮಾಡಲಾಗುವುದು. ಆ ನಂತರ ಡೆತ್‌ ಆಡಿಟ್‌ ವರದಿಯನ್ನು ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಈ ವರ್ಷ ಜನವರಿಯಿಂದ ಜೂನ್‌ ವರೆಗೆ 1,230 ಪ್ರಕರಣಗಳು ಕಂಡುಬಂದಿದ್ದು, ವಲಯವಾರು ಮೈಕ್ರೋ ಪ್ಲ್ರಾನ್‌ ಮಾಡಿಕೊಂಡು ಡೆಂಘೀ ಹರಡುವಿಕೆಯನ್ನು ನಿಯಂತ್ರಿಸಲು ಸೂಚಿಸಲಾಗಿದೆ ಬಿಬಿಎಂಪಿ ಕ್ರಮ ಕೈಗೊಂಡಿದೆ. ಬೊಮ್ಮನಹಳ್ಳಿ ವಲಯದಲ್ಲಿ 122, ಪೂರ್ವ ವಲಯದಲ್ಲಿ 218, ಮಹದೇವಪುರ ವಲಯದಲ್ಲಿ 386, ಆರ್‌.ಆರ್‌ ನಗರ-75, ದಕ್ಷಿಣ- 190, ಪಶ್ಚಿಮ-141, ಯಲಹಂಕ-90, ದಾಸರಹಳ್ಳಿ ವಲಯದಲ್ಲಿ 8 ಪ್ರಕರಣ ಸೇರಿ ನಗರದಲ್ಲಿ ಒಟ್ಟು 1,230 ಡೆಂಘಿ ಪ್ರಕರಣಗಳು ಕಂಡು ಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next