ತಿರುವನಂತಪುರಂ : ಕೇರಳದಲ್ಲಿ ಝೀಕಾ ವೈರಸ್ ತನ್ನ ಹರಡುವಿಕೆಯನ್ನು ಮುಂದುವರಿಸಿದೆ. ಇಂದು( ಮಂಗಳವಾರ, ಜುಲೈ 13) ಓರ್ವ ಮಹಿಳೆಯನ್ನು ಒಳಗೊಂಡು ಇಬ್ಬರಲ್ಲಿ ಝೀಕಾ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
‘ಪುಂಥುರಾದ 35 ವರ್ಷದ ಪುರುಷ ಹಾಗೂ ಸಷ್ಟಮಂಗಲಂನ 41 ವರ್ಷದ ಮಹಿಳೆಯಲ್ಲಿ ಝೀಕಾ ವೈರಸ್ ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು ಝೀಕಾ ಸೋಂಕಿತರ ಸಂಖ್ಯೆ 21 ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ : ಮುಂಬೈ: ನೀರಿನಲ್ಲಿ ಕೊಚ್ಚಿಹೋಗುತೀಡ ಮಹಿಳೆಯನ್ನು ರಕ್ಷಿಸಿ ಜವಾಬ್ದಾರಿ ಮೆರೆದ ಛಾಯಾಗ್ರಾಹಕ
ಈ ಬಗ್ಗೆ ಮಾಹಿತಿ ನೀಡಿದ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್, ರಾಜ್ಯದಲ್ಲಿ ಝೀಕಾ ಸೋಂಕಿನ ಸಂಖ್ಯೆ ಹೆಚ್ಚಳವಾಗುತ್ತಿದೆ. ಯಾವುದೇ ಕಾರಣಕ್ಕೂ ಈ ಸೋಂಕಿನ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.
ಇನ್ನು, ನಿನ್ನೆ(ಸೋಮವಾರ, ಜುಲೈ 12) ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ರಾಜ್ಯದಲ್ಲಿ ಕಾಣಿಸಿಕೊಂಡ ಝೀಕಾ ವೈರಸ್ ಪರೀಕ್ಷಾ ಕಾರ್ಯ ಆರಂಭಿಸಲಾಗಿದೆ. ಸೋಂಕಿತರ ರಕ್ತದ ಮಾದರಿಯನ್ನು ಸರ್ಕಾರಿ ವೈದ್ಯಕೀಯ ಕಾಲೇಜಿನ ವೈರಾಲಜಿ ಪ್ರಯೋಗಾಲಯ ಹಾಗೂ ಕೊಯಮತ್ತೂರಿನ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿದೆ ಎಂದು ತಿಳಿಸಿದ ಅವರು, ಒಟ್ಟು 15 ಜನರ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ ಒಬ್ಬ ವ್ಯಕ್ತಿಗೆ ಡೆಂಗಿ ಇರುವುದು ಪತ್ತೆಯಾಗಿದೆ. ಉಳಿದ 13 ಜನರ ಮಾದರಿಯಲ್ಲಿ ಯಾವುದೇ ವೈರಸ್ ಇರುವುದು ದೃಢಪಟ್ಟಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಜುಲೈ 15ಕ್ಕೆ ವಿವೋ ವೈ72 5 ಜಿ ಮೊಬೈಲ್ ಭಾರತದ ಮಾರುಕಟ್ಟೆಯಲ್ಲಿ ಲಭ್ಯ