Advertisement

ಎರಡು ತಿಂಗಳಿಂದ ಕಗ್ಗತ್ತಲ್ಲಲ್ಲಿಯೇ ಜೀವನ

03:29 PM Oct 30, 2021 | Team Udayavani |

ಮುದಗಲ್ಲ: ಪಟ್ಟಣ ಸಮೀಪದ ತಲೇಖಾನ ಗ್ರಾಪಂ ವ್ಯಾಪ್ತಿಯ ಸುಮಾರು 200 ಕುಟುಂಬಗಳಿಗೆ ಎನ್‌ಜಿಒ ವಿದ್ಯುತ್‌ ಸಂಪರ್ಕವಿಲ್ಲದೇ ಕತ್ತಲಲ್ಲಿಯೇ ಜೀವನ ಸಾಗಿಸುವಂತಾಗಿದೆ.

Advertisement

ಹೌದು. ಆಗಸ್ಟ್‌ ತಿಂಗಳಿಂದ ಜೆಸ್ಕಾಂ ಇಲಾಖೆ ರೈತರ ಪಂಪ್‌ಸೆಟ್‌ ಲೈನ್‌ ಮತ್ತು ನಿರಂತರ ಜ್ಯೋತಿ ಲೈನ್‌ ಬೇರ್ಪಡಿಸಿದ್ದರಿಂದ ಇಲ್ಲಿನ ರೂಪಚೇಂದ್ರಪ್ಪನ ತೋಟದಲ್ಲಿನ 20 ಮನೆಗಳು, ಗೋಲ್ಲರಹಟ್ಟಿಯ 32 ಮನೆಗಳು, ಯರದೊಡ್ಡಿ ಕ್ರಾಸ್‌ದಲ್ಲಿನ 18 ಮನೆಗಳು, ಒಡ್ಡರಹಟ್ಟಿಯಲ್ಲಿನ 10 ಮನೆಗಳು ಸೇರಿದಂತೆ 200ಕ್ಕೂ ಹೆಚ್ಚು ಕುಟುಂಬಗಳು ಅಕ್ಷರ ಸಹ ನರಕ ಅನುಭವಿಸುತ್ತಿವೆ.

ರಾತ್ರಿ ಸಮಯದಲ್ಲಿ ಕತ್ತಲಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡಬೇಕು. ವಿಷಜಂತು, ಕಾಡು ಪ್ರಾಣಿಗಳ ಭಯದಿಂದ ಸಂಜೆ 7ಗಂಟೆ ನಂತರ ಮಹಿಳೆಯರು, ಮಕ್ಕಳು ಬಾಗಿಲು ಹಾಕುವ ಸ್ಥಿತಿ ಇದೆ.

ರಾತ್ರಿ ಸಮಯದಲ್ಲಿ ಜನರು ಬರ್ಹಿದೆಸೆಗೆ ತೆರಳಲು ಸಹ ಭಯಪಡುವಂತಾಗಿದೆ. ಮೊಬೈಲ್‌ ಚಾರ್ಜಿಗೂ ಸಹ ವಿದ್ಯುತ್‌ ಸಂಪರ್ಕ ಇರುವ ಸಮೀಪದ ಗ್ರಾಮ, ತಾಂಡಾಗಳನ್ನು ಅವಲಂಬಿಸಬೇಕಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಿದೆ. ವಿದ್ಯುತ್‌ ಸಂಪರ್ಕ ಕಲ್ಪಿಸುವಂತೆ ಇಲ್ಲಿನ ಚುನಾಯಿತ ಪ್ರತಿನಿಧಿಗಳಿಗೆ, ಜೆಸ್ಕಾಂ ಕಾರ್ಯಪಾಲನಾ ಅಭಿಯಂತರರ ಗಮನಕ್ಕೆ ತರಲಾಗಿದೆ.

ಸಿಂಧನೂರಿನ ಜೆಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಹೋಗಿ ಒಂದೂವರೆ ತಿಂಗಳು ಗತಿಸಿದೆ ಎಂದು ಗ್ರಾಪಂ ಸದಸ್ಯರಾದ ದುರುಗಪ್ಪ ಕಟ್ಟಿಮನಿ, ಪಾಂಡುರಂಗ ನಾಯ್ಕ, ಮಾಜಿ ಸದಸ್ಯ ಗ್ಯಾನಪ್ಪ ರಾಠೊಡ, ಹನುಮಂತಪ್ಪ ಗೋಲರಹಟ್ಟಿ ತಿಳಿಸಿದ್ದಾರೆ.

Advertisement

ಇದನ್ನೂ ಓದಿ: ಬಾಂಗ್ಲಾ ಆಯ್ತು ಈಗ ಪಾಕ್ ನ ಸಿಂಧ್ ನಲ್ಲಿರುವ ಹಿಂದೂ ದೇವಾಲಯಕ್ಕೆ ನುಗ್ಗಿ ಚಿನ್ನಾಭರಣ ಕಳವು

ತೋಟದ ಮನೆ ಯೋಜನೆಯಡಿ ಕ್ಷೇತ್ರದ ಪ್ರತಿ ಮನೆಗೂ ವಿದ್ಯುತ್‌ ಸಂಪರ್ಕ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು ಕಾರ್ಯ ವಿಳಂಬವಾಗುತ್ತಿದೆ. -ಆರ್‌.ಬಸನಗೌಡ ತುರುವಿಹಾಳ, ಶಾಸಕ

ನಿರಂತರ ಜ್ಯೋತಿ ಯೋಜನೆ ಕಾಮಗಾರಿ ನಡೆಸಿದಾಗಲೇ ಕೈ ಬಿಟ್ಟ ಮನೆಗಳನ್ನು ಸರ್ವೇ ಮಾಡಿ ಆಂದಾಜು ಪತ್ರಿಕೆ ತಯಾರಿಸಿ ವಿದ್ಯುತ್‌ ಸಂಪರ್ಕ ನೀಡಬೇಕಿತ್ತು. 1 ಅಥವಾ 2 ಲಕ್ಷ ರೂ. ಅಂದಾಜು ಪತ್ರಿಕೆ ಕಾಮಗಾರಿಗಳು ಎಇಇ ಹಂತದಲ್ಲಿವೆ. ಅನುದಾನ ಮಂಜೂರು ಮಾಡಿದ್ದೇನೆ. -ರಾಜಶೇಖರ, ಇಇ ಜೆಸ್ಕಾಂ ಸಿಂಧನೂರು ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next