Advertisement

US: ಎರಡೇ ನಿಮಿಷದ ಗೂಗಲ್‌ ಮೀಟ್‌: 200 ಉದ್ಯೋಗಿಗಳು ಒಟ್ಟಿಗೆ ವಜಾ!

12:36 AM Jan 06, 2024 | Team Udayavani |

ವಾಷಿಂಗ್ಟನ್‌: ಕಳೆದ ವರ್ಷ ಆರಂಭವಾದ ಉದ್ಯೋಗ ಕಡಿತದ ಸರಣಿ ಈ ವರ್ಷಕ್ಕೂ ಮುಂದುವರಿದಿದೆ. ಅಮೆರಿಕದ ನವೋದ್ಯಮ ಸಂಸ್ಥೆಯೊಂದು 2 ನಿಮಿಷದ ಗೂಗಲ್‌ ಮೀಟ್‌ನಲ್ಲಿ 200 ಸಿಬಂದಿಯನ್ನು ಕೆಲಸದಿಂದ ವಜಾಗೊಳಿಸಿದೆ. ಹೌದು ಫ್ರಂಟ್‌ಡೆಸ್ಕ್ ಎನ್ನುವ ನವೋದ್ಯಮ ಸಂಸ್ಥೆಯ ಸಿಇಒ ಜೆಸ್ಸಿ ಡಿಪೆಂಟೋ 2 ನಿಮಿಷಗಳ ಅವಧಿಯ ಗೂಗಲ್‌ ಮೀಟ್‌ನಲ್ಲಿ ತಮ್ಮ ಉದ್ಯೋಗಿಗಳೊಂದಿಗೆ ಮಾತ ನಾಡಿದ್ದಾರೆ.

Advertisement

ಈ ವೇಳೆ ಸಂಸ್ಥೆ ಆರ್ಥಿಕ ನಷ್ಟ ಎದುರಿಸುತ್ತಿದ್ದು, ದಿವಾಳಿ ಹಂತ ತಲುಪಿದೆ. ಈ ಹಿನ್ನೆಲೆಯಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ ಎಂದಿದ್ದಾರೆ. ಬೆನ್ನಲ್ಲೇ 200 ಉದ್ಯೋಗಿಗಳಿದ್ದ ಹಲವು ತಂಡಗಳನ್ನು ವಜಾಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next