Advertisement

ಒಂದೇ ದಿನ ಗಡಿ ನುಸುಳುತ್ತಿದ್ದ 7 ಪಾಕ್‌ ಉಗ್ರರ ಹತ್ಯೆ;ಯೋಧ ಹುತಾತ್ಮ 

11:20 AM Jun 08, 2017 | Team Udayavani |

ಶ್ರೀನಗರ: ಕಾಶ್ಮೀರದ ವಿವಿಧೆಡೆ ಗಡಿನುಸುಳುವ ಉಗ್ರರ ಯತ್ನವನ್ನು ಯೋಧರು ವಿಫ‌ಲಗೊಳಿಸಿದ್ದು, ಗುಂಡಿನ ದಾಳಿಯಲ್ಲಿ  ಗುರುವಾರ ಒಂದೇ ದಿನ 7 ಮಂದಿ ಉಗ್ರರನ್ನು ಹತ್ಯೆಗೈಯಲಾಗಿದೆ.ಭೀಕರ ಗುಂಡಿನ ಚಕಮಕಿಯಲ್ಲಿ ಓರ್ವ ಯೋಧ ಹುತಾತ್ಮನಾಗಿ,ಇಬ್ಬರು ಯೋಧರು ಗಾಯಗೊಂಡಿದ್ದಾರೆ. 

Advertisement

ಮೊದಲು ನೌಗಾಮ್‌ ಸೆಕ್ಟರ್‌ ನಲ್ಲಿ ಗಡಿ ನುಸುಳಲು ಯತ್ನಿಸುತ್ತಿದ್ದ ಉಗ್ರರ ಯತ್ನವನ್ನು ಬಿಎಸ್‌ಎಫ್ ವಿಫ‌ಲಗೊಳಿಸಿದ್ದು, ಗುಂಡಿನ ಚಕಮಕಿಯಲ್ಲಿ ಓರ್ವ ಯೋಧ ಹುತಾತ್ಮನಾಗಿದ್ದು, ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ. ಉಳಿದೆಡೆ ಸೇನೆ ಸಕಾಲಿಕ ದಾಳಿ ನಡೆಸಿ ಐವರು ಉಗ್ರರನ್ನು ಹೊಡೆದುರುಳಿಸಿದೆ. ಭೀಕರ ಗುಂಡಿನ ಕಾಳಗದಲ್ಲಿ ಇಬ್ಬರು ಯೋಧರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. 

ಇನ್ನಷ್ಟು ಉಗ್ರರು ಸ್ಥಳದಲ್ಲಿ ಅಡಗಿರುವ ಸಾಧ್ಯತೆಯಿರುವ ಹಿನ್ನಲೆಯಲ್ಲಿ ಸೇನೆ ಭಾರೀ ಕಟ್ಟೆಚ್ಚರ  ಮುಂದುವರಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next