Advertisement

ಎರಡು ಕೋಟಿ ಮಂದಿ ಕೋವಿಡ್‌ ಲಸಿಕೆ ಪೂರ್ಣ

10:36 PM Oct 16, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಲಸಿಕೆ ಎರಡನೇ ಡೋಸ್‌ ಪಡೆದವರ ಸಂಖ್ಯೆ ಎರಡು ಕೋಟಿ ಗಡಿದಾಟಿದೆ. ಈ ಮೂಲಕ ರಾಜ್ಯದ ಲಸಿಕೆ ಅರ್ಹ ಜನಸಂಖ್ಯೆಯಲ್ಲಿ ಶೇ.42 ರಷ್ಟು ಮಂದಿ ಲಸಿಕೆ ಪೂರ್ಣಗೊಳಿಸಿದಂತಾಗಿದೆ.

Advertisement

18 ವರ್ಷ ಮೇಲ್ಪಟ್ಟವರ ಸಂಖ್ಯೆ 4.8 ಕೋಟಿ ಇದೆ. ಕೋವಿನ್‌ ಪೋರ್ಟಲ್‌ ಮಾಹಿತಿಯಂತೆ ಶನಿವಾರದ ಅಂತ್ಯಕ್ಕೆ 4,07,80,939 ಮಂದಿ ಮೊದಲ ಡೋಸ್‌, 2,00,51,427 ಮಂದಿ ಎರಡನೇ ಡೋಸ್‌ ಪೂರ್ಣಗೊಳಿಸಿದ್ದಾರೆ. ಮೊದಲ ಡೋಸ್‌ ಶೇ.85 ರಷ್ಟು ಮಂದಿ ಮೊದಲ ಡೋಸ್‌, ಶೇ.42 ರಷ್ಟು ಮಂದಿ ಎರಡೂ ಡೋಸ್‌ ಪೂರ್ಣಗೊಳಿಸಿದಂತಾಗಿದೆ. ಮೊದಲ ಮತ್ತು ಎರಡನೇ ಡೋಸ್‌ ಸೇರಿ ಒಟ್ಟು 6.08 ಕೋಟಿ ಡೋಸ್‌ ನಷ್ಟು ಲಸಿಕೆಯನ್ನು ವಿತರಣೆ ಮಾಡಲಾಗಿದೆ.

ಸೆಪ್ಟೆಂಬರ್‌ನಿಂದೀಚೆಗೆ ನಿತ್ಯ ಸರಾಸರಿ ಐದು ಲಕ್ಷ ಮಂದಿಗೆ ಲಸಿಕೆ ಪಡೆಯುತ್ತಿದ್ದಾರೆ. ಅಲ್ಲದೆ, ಪ್ರತಿ ಬುಧವಾರ ನಡೆಯುವ ಲಸಿಕೆ ಮೇಳದಲ್ಲಿ 15 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿ ಲಸಿಕೆ ಪಡೆದಿದ್ದಾರೆ. ಈವರೆಗೂ ಲಸಿಕೆಯಿಂದ ದೂರ ಉಳಿದ 71 ಲಕ್ಷ (ಶೇ.15 ರಷ್ಟು) ಮಂದಿಯನ್ನು ಶೀಘ್ರದಲ್ಲಿಯೇ ಪತ್ತೆ ಮಾಡಿ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ವಾಂಖೆಡೆ ಮೆಚ್ಚುವಂತೆ ನಡೆಯುವೆ: ಆರ್ಯನ್‌ ಖಾನ್‌!

ಹಬ್ಬದ ಹಿನ್ನೆಲೆ ಮಂಕಾದ ಲಸಿಕೆ ಅಭಿಯಾನ:
ದಸರಾ ಹಬ್ಬದ ಹಿನ್ನೆಲೆ ಕಳೆದ ಮೂರು ದಿನಗಳಿಂದ ಲಸಿಕೆ ಪಡೆಯಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಗುರುವಾರ 1.02 ಲಕ್ಷ, ಶುಕ್ರವಾರ 45 ಸಾವಿರ ಮಂದಿ ಮಾತ್ರ ಲಸಿಕೆ ಪಡೆದಿದ್ದಾರೆ. ಇನ್ನು ಶನಿವಾರ 2.5 ಲಕ್ಷ ಮಂದಿ ಲಸಿಕೆ ಪಡೆದಿದ್ದು, ಸೋಮವಾರದಿಂದ ಈ ಹಿಂದಿನಂತೆ ಐದು ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲು ಕ್ರಮವಹಿಸಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next