Advertisement

ಜಮ್ಮು- ಕಾಶ್ಮೀರ ಎನ್‌ಕೌಂಟರ್‌: ಇಬ್ಬರು ಉಗ್ರರ ಹತ್ಯೆ

11:46 PM Jan 10, 2022 | Team Udayavani |

ಶ್ರೀನಗರ/ ಕೋಲ್ಕತಾ: ಜಮ್ಮು ಮತ್ತು ಕಾಶ್ಮೀರದ ದಕ್ಷಿಣ ಭಾಗದಲ್ಲಿರುವ ಕುಲ್ಗಾಂನಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಕೊಲ್ಲಲಾಗಿದೆ. ಅವರು ಅಲ್‌-ಬದರ್‌ ಉಗ್ರ ಸಂಘಟನೆಗೆ ಸೇರಿದವರಾಗಿದ್ದು, ಸ್ಥಳೀಯ ನಿವಾಸಿಗಳೇ ಆಗಿದ್ದಾರೆ ಎಂದು ಗುರುತಿಸಲಾಗಿದೆ.

Advertisement

ರವಿವಾರ ತಡ ರಾತ್ರಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ, ಹತ್ತು ದಿನಗಳ ಅವಧಿಯಲ್ಲಿ 13 ಮಂದಿ ಉಗ್ರರು ವಿವಿಧ ಕಾರ್ಯಾಚರಣೆಗಳಲ್ಲಿ ಜೀವ ಕಳೆದುಕೊಂಡಂತಾಗಿದೆ.

ಎನ್‌ಐಎ ಚಾರ್ಜ್‌ಶೀಟ್‌: ದೇಶದಲ್ಲಿ ಉಗ್ರ ಚಟುವಟಿಕೆಗಳಿಗೆ ಸೇರಲು ಕುಮ್ಮಕ್ಕು ನೀಡಲು ಸಹಯೋಗ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ದಂತೆ ಐವರ ವಿರುದ್ಧ ಎನ್‌ಐಎ ಆರೋಪಪಟ್ಟಿ ಹೊರಿಸಿದೆ.

ಇದನ್ನೂ ಓದಿ:ದ್ವಿತೀಯ ಸುತ್ತು ತಲುಪಿದ ಪ್ರಜ್ಞೇಶ್ ಗುಣೇಶ್ವರನ್

ಜಮಾತ್‌- ಉಲ್‌- ಮುಜಾ ಹಿದೀನ್‌/ಅಲ್‌-ಖೈದಾ ಇನ್‌ ಇಂಡಿಯನ್‌ ಸಬ್‌ಕಾಂಟಿನೆಂಟ್‌ನ ನಾಲ್ವರು ಮತ್ತು ಪಶ್ಚಿಮ ಬಂಗಾಲದ ನಿವಾಸಿಯ ಹೆಸರು ಅದರಲ್ಲಿ ಉಲ್ಲೇಖೀಸಲಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next