Advertisement

ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ

03:17 PM Oct 04, 2018 | Sharanya Alva |

ಪಾಟ್ನಾ: ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದ 45ರ ಹರೆಯದ ಮಹಿಳೆಯನ್ನು ಬಲವಂತವಾಗಿ ಹೊರಗೆಳೆದು ಇಬ್ಬರು ಕಾಮುಕರು ಅತ್ಯಾಚಾರ ಎಸಗಿರುವ ಘಟನೆ ಪಾಟ್ನಾ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಘಟನೆಗೆ ಸಂಬಂಧಿಸಿದಂತೆ ಶಿವ್ ಪೂಜಾನ್ ಮಹತೋ ಮತ್ತು ವಿಶಾಲ್ ಇಬ್ಬರನ್ನು ಬಂಧಿಸಿದ್ದಾರೆ. ಕಾಮ ಪಿಶಾಚಿಗಳು ಮಹಿಳೆ ಮಹಿಳೆಗೆ ಹಿಗ್ಗಾಮುಗ್ಗಾ ಹೊಡೆಯುವುದನ್ನು ವಿಡಿಯೋ ರೆಕಾರ್ಡ್ ಮಾಡಿದ್ದು, ಬಳಿಕ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಡಿಯೋದಲ್ಲಿ, ಮೊದಲಿಗೆ ಮಹತೋ ಸ್ನಾನ ಮಾಡುತ್ತಿದ್ದ ಮಹಿಳೆ ಬಳಿ ಹೋಗಿ, ಆಕೆಯನ್ನು ಬಲವಂತವಾಗಿ ಹೊರಗೆಳೆದು ಹೊಡೆದಿದ್ದ. ತನ್ನನ್ನು ಬಿಟ್ಟುಬಿಡಿ ಎಂದು ಆಕೆ ಇಬ್ಬರಲ್ಲೂ ಕೈಮುಗಿದು ಕೇಳಿಕೊಂಡಿದ್ದಳು. ತನಗೆ ಇಬ್ಬರು ಮಕ್ಕಳಿದ್ದಾರೆ. ನೀವು ಗಂಗಾ ನದಿಯ ಪಾವಿತ್ರ್ಯವನ್ನಾದರೂ ಪರಿಗಣಿಸಿ ನನ್ನ ತಾಯಿ ಎಂದು ಬಿಟ್ಟುಬಿಡಿ ಎಂದು ಮನವಿ ಮಾಡಿಕೊಂಡಿದ್ದಳು. ಆದರೆ ನರರೂಪದ ರಾಕ್ಷಸರು ಸುಮ್ಮನಿರುವಂತೆ ಗದರಿಸಿ ಹೊಡೆಯುವ ದೃಶ್ಯ ವಿಡಿಯೋದಲ್ಲಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರ ಗಮನಕ್ಕೆ ಬಂದ ಬಳಿಕ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಆದರೆ ಸ್ಥಳೀಯರ ಪ್ರಕಾರ ಆರಂಭದಲ್ಲಿ ಮಹಿಳೆ ದೂರು ನೀಡಲು ಹೋದಾಗ ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿರುವುದಾಗಿ ಆರೋಪಿಸಿದ್ದಾರೆ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next