Advertisement

ಉಡುಪಿ ನಗರಸಭೆಯ ಇಬ್ಬರು ಸದಸ್ಯೆಯರಿಗೆ ಕೋವಿಡ್ ಸೋಂಕು ದೃಢ

02:14 PM Jul 15, 2020 | keerthan |

ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಉಡುಪಿ ನಗರಸಭೆಯ ಇಬ್ಬರು ಸದಸ್ಯೆಯರಿಗೆ ಇಂದು ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ.

Advertisement

ಇವರಲ್ಲಿ ಓರ್ವ ಸದಸ್ಯೆ ಕಳೆದ ಹಲವು ದಿನಗಳಿಂದ ಅನಾರೋಗ್ಯ ನಿಮಿತ್ತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಇವರಿಗೆ ಕೋವಿಡ್-19 ಸೋಂಕು ದೃಢವಾದ ಕಾರಣ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರಿಬ್ಬರಿಗೂ ಯಾವ ಮೂಲದಿಂದ ಸೋಂಕು ತಾಗಿದೆ ಎಂದು ಇನ್ನೂ ನಿಖರವಾಗಿಲ್ಲ. ಮಂಗಳವಾರ ನಗರಸಭೆಯ ಅಧಿಕಾರಿಯೋರ್ವರಿಗೆ ಕೋವಿಡ್ ಸೋಂಕು ದೃಢವಾಗಿತ್ತು. ಈ ಹಿನ್ನಲೆಯಲ್ಲಿ ಕಚೇರಿಯನ್ನು ಸೀಲ್ ಡೌನ್ ಮಾಡಿ ಸ್ಯಾನಿಟೈಸ್ ಮಾಡಲಾಗಿದೆ.

ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜನರು ಅನಾವಶ್ಯಕವಾಗಿ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಬಾರದು. ತುರ್ತು ಕೆಲಸಗಳಿಗೆ ಮಾತ್ರ ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಭೇಟಿ ನೀಡಬೇಕು ಎಂದು ಮನವಿಗಳು ಕೇಳಿಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next