ಕಂಕೇರ್: ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಸೋಮವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ 39 ಹಿಂಸಾಚಾರ ಪ್ರಕರಣಗಳಲ್ಲಿ ಬೇಕಾಗಿದ್ದ ಇಬ್ಬರು ನಕ್ಸಲರನ್ನು ಭದ್ರತಾ ಪಡೆಗಳು ಎನ್‌ಕೌಂಟರ್ ನಲ್ಲಿ ಹತ್ಯೆ ಗೈದಿದ್ದಾರೆ.
ತಲೆಯ ಮೇಲೆ 8 ಲಕ್ಷ ರೂ. ಇನಾಮು ಹೊತ್ತ ಮಾವೋವಾದಿ ನಕ್ಸಲ್ ಮತ್ತು 5 ಲಕ್ಷ ರೂ ಇನಾಮು ಹೊತ್ತಿದ್ದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಹಲವಾರು ಮಾವೋವಾದಿ ಘಟನೆಗಳಿಗೆ ಸಂಬಂಧಿಸಿದಂತೆ ಇಬ್ಬರು ಬೇಕಾಗಿದ್ದರು.
ಇದನ್ನೂ ಓದಿ : ಕೇರಳ: ದಿಢೀರನೆ 50 ಮೀಟರ್ ದೂರದವರೆಗೆ ಹಿಂದಕ್ಕೆ ಸರಿದ ಸಮುದ್ರದ ಅಲೆ!
ಸೋಮವಾರ ಕಾಡಿನಲ್ಲಿ ನಸುಕಿನ 3 ಗಂಟೆ ಸುಮಾರಿಗೆ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ) ಮತ್ತು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಪ್ರತ್ಯೇಕ ತಂಡಗಳು ಮಾವೋವಾದಿ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಗುಂಡಿನ ಚಕಮಕಿ ನಡೆದಿದೆ ಎಂದು ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಬಸ್ತರ್ ರೇಂಜ್) ಸುಂದರರಾಜ್ ಪಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅರಣ್ಯದಲ್ಲಿ ಮಾವೋವಾದಿಗಳ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಭಾನುವಾರ ಆ ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ರಾಜ್ಯ ರಾಜಧಾನಿ ರಾಯ್‌ಪುರದಿಂದ 200 ಕಿಮೀ ದೂರದಲ್ಲಿರುವ ಕಾಡಿನಲ್ಲಿ ಗುಂಡಿನ ಚಕಮಕಿ ನಡೆಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.
ಗುಂಡಿನ ಕಾಳಗ ನಿಂತ ನಂತರ ಇಬ್ಬರು ಮಾವೋವಾದಿಗಳ ಶವಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಹತ್ಯೆಗೀಡಾದವರು ಉತ್ತರ ಬಸ್ತಾರ್ ನ ದರ್ಶನ್ ಪಡ್ಡಾ (32) ಮತ್ತು ತಂಡದ ಕಮಾಂಡರ್ ಜಗೇಶ್ ಸಲಾಮ್ (23) ಎಂದು ಗುರುತಿಸಲಾಗಿದೆ.