ನವದೆಹಲಿ: ಮೇಡ್ ಇನ್ ಇಂಡಿಯಾ ಪರಿಕಲ್ಪನೆಯ ತಳಹದಿಯಲ್ಲಿ 2 ಕೋವಿಡ್ ಲಸಿಕೆಗಳ ಮೂಲಕ ಮಾನವೀಯತೆಯ ರಕ್ಷಣೆಗೆ ಭಾರತ ಸಿದ್ಧವಾಗಿದೆ. ಆಧುನಿಕವಾದ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಮೂಲಕ ಬಡ ಜನರ ಸಬಲೀಕರಣಕ್ಕೆ ಭಾರತ ಕೈಗೊಂಡಿರುವ ಕಾರ್ಯಗಳ ಕುರಿತಾಗಿ ಇಡೀ ವಿಶ್ವ ಮಾತನಾಡಿಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
16ನೇ ಪ್ರವಾಸಿ ಭಾರತೀಯ ಕಾರ್ಯಕ್ರಮದಲ್ಲಿ ಮಾತನಾಡಿರುವ ಇವರು ಕೋವಿಡ್ ಗೆ ಸಂಬಂಧಿಸಿರುವ ದೇಶೀಯವಾದ ಲಸಿಕೆಯ ಕುರಿತಾಗಿ ಇಡೀ ವಿಶ್ವವೇ ಅತ್ಯಂತ ಕಾತುರತೆಯಿಂದ ಕಾಯುತ್ತಿದೆ ಎಂದಿರುವ ಮೋದಿ ಅಷ್ಟೆ ಅಲ್ಲದೆ ಈ ಲಸಿಕೆಗಳು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂಬುವುದರ ಕುರಿತಾಗಿಯೂ ಕಣ್ಣಿಟ್ಟಿದೆ ಎಂದಿದ್ದಾರೆ.
ಕೋವಿಡ್ ಸೋಂಕಿನಿಂದ ಭಾರತ ಹಲವಾರು ವಿಷಯಗಳನ್ನು ಕಲಿತುಕೊಂಡಿದೆ,ಅದಕ್ಕಿಂತಲೂ ಮುಖ್ಯವಾಗಿ ಸ್ವಾವಲಂಬಿಯಾಗುವುದನ್ನು ಅರಿತುಕೊಂಡಿದೆ ಎಂದಿದ್ದಾರೆ.
ಇದನ್ನೂ ಓದಿ:ವಿದ್ಯುತ್ ಬಿಲ್ ಕಟ್ಟಲು ಯಾವೆಲ್ಲಾ ಆಪ್ಲಿಕೇಶನ್ ಗಳಿವೆ ? ಇಲ್ಲಿದೆ ಮಾಹಿತಿ
ಈ ಹಿಂದೆ ಕೋವಿಡ್ ಆರಂಭಗೊಂಡ ಸಮಯದಲ್ಲಿ ಪಿಪಿಇ ಕಿಟ್ ಮಾಸ್ಕ್ , ವೆಂಟಿಲೇಟರ್ ಗಳನ್ನು ಭಾರತವು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿತ್ತು ಆದರೆ ಇದೀಗ ಭಾರತ ಈ ವಿಚಾರದಲ್ಲಿಯೂ ಸ್ವಾವಲಂಬನೆಯನ್ನು ಸಾಧಿಸಿದೆ ಎಂದಿದ್ದು, ಭಾರತವು ಹಿಂದಿನಿಂದಲೂ ಮಾನವೀಯತೆಯ ರಕ್ಷಣೆಯ ಕಾರ್ಯವನ್ನು ಮಾಡುತ್ತಾ ಬಂದಿದ್ದು ಈಗಲೂ ಅದೇ ಕೆಲಸವನ್ನು ಮಾಡುತ್ತಿದೆ ಎಂದಿದ್ದಾರೆ.
ಭಾರತೀಯ ಮೂಲದ ಎರಡು ಲಸಿಕೆಗಳನ್ನು ತುರ್ತು ಪರಿಸ್ಥಿತಿಯಲ್ಲಿ ಬಳಕೆ ಮಾಡಲು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)ಒಪ್ಪಿಗೆ ಸೂಚಿಸಿದ್ದು, ಕೆಲವೇ ದಿನಗಳಲ್ಲಿ ದೇಶದ ಪ್ರತಿಯೊಬ್ಬರಿಗೂ ಈ ಲಸಿಕೆ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.