Advertisement

ಎನ್‌ಎಂಎಂಸಿಯಿಂದ ಎರಡು ಪ್ರಯೋಗಾಲಯ ಸ್ಥಾಪನೆ

05:17 PM Jul 22, 2020 | Suhan S |

ನವಿಮುಂಬಯಿ, ಜು. 21: ದಿನದಿಂದ ದಿನಕ್ಕೆ ನಗರದಲ್ಲಿ ಕೋವಿಡ್ ಸೋಂಕು ಉಲ್ಬಣಗೊಳ್ಳುತ್ತಿದ್ದು, ಮುಂದಿನ ಎರಡು-ಮೂರು ವಾರಗಳ ಕಾಲ ನಿರ್ಣಾಯಕವಾಗಲಿದೆ ಎಂದು ನವಿಮುಂಬಯಿ ಮಹಾನಗರ ಪಾಲಿಕೆ ಎಚ್ಚರಿಕೆ ನೀಡಿದೆ.

Advertisement

ನವಿಮುಂಬಯಿ ಮಹಾನಗರ ಪಾಲಿಕೆಯು ಕೋವಿಡ್ ವಿರುದ್ಧ ಹೊರಾಡಲು ತನ್ನ ಕ್ರಮಗಳನ್ನು ಹೆಚ್ಚಿಸುತ್ತಿದೆ, ಕಳೆದ ವಾರ ಪ್ರಾರಂಭವಾದ ಆ್ಯಂಟಿಜೆನ್‌ ಪರೀಕ್ಷೆಯ ಹೊರತಾಗಿ, ಎನ್‌ ಎಂಎಂಸಿ ಕೋವಿಡ್‌ ಪರೀಕ್ಷೆಗಳಿಗಾಗಿ ಎರಡು ಪ್ರಯೋಗಾಲಯಗಳನ್ನು ಸ್ಥಾಪಿಸಲು ಪ್ರಾರಂಭಿಸಿದ್ದು, ಪರಿಣಾಮಕಾರಿ ಸಂಪರ್ಕ ಪತ್ತೆ ಮತ್ತು ನಿಯಂತ್ರಣಕ್ಕಾಗಿ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ.

15 ದಿನಗಳಲ್ಲಿ ಲ್ಯಾಬ್‌ಗಳು ಸಿದ್ಧ :  ಎನ್‌ಎಂಎಂಸಿ ತನ್ನ ನಿವಾಸಿಗಳ ಸ್ವ್ಯಾಬ್‌ ಮಾದರಿಗಳನ್ನು ಮುಂಬಯಿ ಅಥವಾ ಖಾಸಗಿ ಪ್ರಯೋಗಾಲಯಗಳಿಗೆ ಪರೀಕ್ಷಿಸಲು ಕಳುಹಿಸುತ್ತಿದ್ದು, ವರದಿ ಪಡೆಯಲು 4-5ದಿನ ತಗುಲುತ್ತಿತ್ತು. ಕಳೆದ ವಾರ ಆ್ಯಂಟಿಜೆನ್‌ ಪರೀಕ್ಷೆಯ ಪರಿಚಯ ಮೂಲಕ 30 ನಿಮಿಷದಲ್ಲಿ ಕೋವಿಡ್ ವರದಿ ಪಡೆಯಬಹುದು, ನಿಗಮವು ಎರಡು ಲ್ಯಾಬ್‌ಗಳನ್ನು ಸ್ಥಾಪಿಸಲು ಯಂತ್ರೋಪಕರಣಗಳಿಗೆ ಆದೇಶಿಸಿದ್ದು, ಅದು ದಿನಕ್ಕೆ 300 ಮಾದರಿಗಳನ್ನು ಪರೀಕ್ಷಿಸುತ್ತದೆ. ಮುಂದಿನ 15 ದಿನಗಳಲ್ಲಿ ಲ್ಯಾಬ್‌ಗಳು ಸಿದ್ಧವಾಗುತ್ತವೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

11 ಸಾವಿರ ದಾಟಿದ ಕೋವಿಡ್‌ ಪ್ರಕರಣ : ಎನ್‌ಎಂಎಂಸಿಯಲ್ಲಿ ಕೆಲವು ದಿನಗಳಿಂದ ಪ್ರತಿದಿನ 200ಕ್ಕೂ ಅಧಿಕ ಪ್ರಕರಣಗಳನ್ನು ಪಡೆಯುತ್ತಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 11 ಸಾವಿರ ದಾಟಿದೆ. ಸೋಂಕಿ ಚಿಕಿತ್ಸೆಗೆ ಆಸ್ಪತ್ರೆಗಳ ಆವಶ್ಯಕತೆಯೂ ಹೆಚ್ಚಾಗಿದೆ. ಹೆಚ್ಚಿನ ಹಾಸಿಗೆಗಳನ್ನು ಆಮ್ಲಜನಕದ ಸೌಲಭ್ಯ ಸಜ್ಜುಗೊಳಿಸಲು ಮತ್ತು 400 ಐಸಿಯು ಹಾಸಿಗೆಗಳನ್ನು ಲಭ್ಯಗೊಳಿಸುವಂತೆ ಖಾಸಗಿ ಆಸ್ಪತ್ರೆಗಳನ್ನು ಎನ್‌ ಎಂಎಂಸಿ ಕೇಳಿದೆ. ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತಿಸಲ್ಪಟ್ಟ ನಾಗರಿಕ ಆಸ್ಪತ್ರೆಗಳು ಆಮ್ಲಜನಕ ಮತ್ತು ಐಸಿಯು ಹಾಸಿಗೆಗಳು ಸೇರಿದಂತೆ 1,132 ಹಾಸಿಗೆಗಳನ್ನು ಹೊಂದಿರುವ ಸಿಡ್ಕೊ ಪ್ರದರ್ಶನ ಕೇಂದ್ರದಲ್ಲಿ ಕೋವಿಡ್‌ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. 1,800ಕ್ಕೂ ಅಧಿಕ ವೈದ್ಯರನ್ನು, ಸುಮಾರು 2,000 ದಾದಿಯರನ್ನು ಮತ್ತು 1,600 ಹಾಸಿಗೆ ಸಹಾಯಕರನ್ನು ತಾತ್ಕಾಲಿಕ ಆಧಾರದ ಮೇಲೆ ನೇಮಕ ಮಾಡಲು ಚಾಲನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next