Advertisement

Ayodhya: ಎರಡು ಕಿ.ಮೀ. ತನಕ ಶಬ್ದ ಕೇಳಿಸುವ, 2,400 ಕೆ.ಜಿ. ಅಷ್ಟಧಾತು ಘಂಟೆ!

01:11 AM Jan 11, 2024 | Team Udayavani |

ಇಟಾವಾ: ರಾಮ ಮಂದಿರಕ್ಕೆ ಬೃಹತ್‌ ಆಕಾರದ ಘಂಟೆಯನ್ನು ಸಮರ್ಪಿಸಲಾಗುತ್ತದೆ. ಅದು ಬರೋಬ್ಬರಿ 2,400 ಕೆ.ಜಿ. ತೂಕ ಇರಲಿದೆ.

Advertisement

ಘಂಟೆ 6 ಅಡಿ ಎತ್ತರ, 5 ಅಡಿ ಅಗಲ ಇರಲಿದೆ. ಒಂದು ಬಾರಿ ಬಾರಿಸಿದರೆ 2 ಕಿ.ಮೀ. ದೂರದವರೆಗೆ ಅದರ ಧ್ವನಿ ಕೇಳಲಿದೆ. ದೇಶದಲ್ಲಿಯೇ ಇದೊಂದು ಬೃಹತ್‌ ಘಂಟೆ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರವಾಗಲಿದೆ.

ಅದನ್ನು ಅಷ್ಟಧಾತುಗಳಿಂದ ಸಿದ್ಧಪಡಿಸ ಲಾಗಿದೆ. ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಜಲೇಸಾರ್‌ ಎಂಬ ಪಟ್ಟಣದಲ್ಲಿ ಅದನ್ನು 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸ ಲಾಗಿದೆ. ಅದನ್ನು ಈಗಾಗಲೇ ಅಯೋಧ್ಯೆಗೆ ರೈಲಿನ ಮೂಲಕ ತರಲಾಗಿದೆ.

ಚಿನ್ನ, ಬೆಳ್ಳಿ, ತಾಮ್ರ, ಸತು, ಕಬ್ಬಿಣ, ಸೀಸ, ತವರ, ಪಾದರಸ ಎಂಬ ಎಂಟು ಲೋಹ ಗಳನ್ನು ಸೇರಿಸಿ ಈ ದೇಗುಲವನ್ನು ಸಿದ್ಧಪಡಿಸ ಲಾಗಿದೆ. ಮೂವತ್ತು ಮಂದಿ ನುರಿತ ಕಾರ್ಮಿ ಕರು ಅದರ ನಿರ್ಮಾಣ ಕಾರ್ಯ ದಲ್ಲಿ ತೊಡಗಿಸಿಕೊಂಡಿದ್ದರು. ರಾಮ ಮಂದಿರ ನಿರ್ಮಾಣ ಆಗಬೇಕು ಎಂದು ಕಾನೂನು ಹೋರಾಟ ನಡೆಸಿದ್ದ ನಿರ್ಮೋಹಿ ಅಖಾಡ ಅದರ ನಿರ್ಮಾಣಕ್ಕೆ ಮುಂದಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next