Advertisement

ಛತ್ತೀಸ್‌ಗಢ: ಮಾವೋ ಬಂಡುಕೋರರಿಂದ ಐಇಡಿ ಸ್ಫೋಟ; ಇಬ್ಬರು ಬಲಿ

12:25 PM Sep 17, 2018 | udayavani editorial |

ರಾಯಪುರ : ಛತ್ತೀಸ್‌ಗಢದ ಸುಕ್‌ಮಾ ಜಿಲ್ಲೆಯಲ್ಲಿ ಮಾವೋ ಬಂಡುಕೋರರು ಅವಿತಿಟ್ಟಿದ್ದ  ಐಇಡಿ (ಸುಧಾರಿತ ಸ್ಫೋಟಕ) ಸ್ಫೋಟಗೊಂಡು ಮಹಿಳೆ  ಸಹಿತ ಇಬ್ಬರು ಮೃತಪಟ್ಟ ಘಟನೆ ನಡೆದಿದೆ.

Advertisement

ಮೃತರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ನಗರ ಹೊರವಲಯದಲ್ಲಿ ನಡೆದ ಈ ಘಟನೆಯಲ್ಲಿ ಒಬ್ಬ ಮಹಿಳೆ ಮತ್ತು ಒಬ್ಬ ಪುರುಷ ಸ್ಥಳದಲ್ಲೇ ಮೃತಪಟ್ಟರು ಎಂದು ಎಸ್‌ಪಿ ಅಭಿಷೇಕ್‌ ಮೀಣ ತಿಳಿಸಿದ್ದಾರೆ. 

ಬಸ್ತಾರ್‌ ಪ್ರಾಂತ್ಯದಲ್ಲಿ ಭದ್ರತಾ ಪಡೆಗಳನ್ನು ಗುರಿ ಇರಿಸಿ ಐಇಡಿ ಸ್ಫೋಟಕಗಳನ್ನು ಮಾವೋ ಬಂಡುಕೋರರು ಬಳಸುವುದು ಸಾಮಾನ್ಯವಾಗಿದೆ. ಮಾವೋಗಳ ಈ ಬಗೆಯ ಕೃತ್ಯಕ್ಕೆ ಹಲವಾರು ಪೊಲೀಸರು ಈ ವರೆಗೆ ಬಲಿಯಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next