Advertisement

ವೆಬ್‌ಸೈಟ್‌ ಹ್ಯಾಕಿಂಗ್‌ ಖದೀಮರು:ಇಬ್ಬರು ಕಾಶ್ಮೀರಿಗಳು ಅರೆಸ್ಟ್‌

12:01 PM Apr 28, 2018 | Team Udayavani |

ಹೊಸದಿಲ್ಲಿ : ಸರಕಾರದ್ದೂ ಸೇರಿದಂತೆ ಐನೂರಕ್ಕೂ ಅಧಿಕ ಭಾರತೀಯ ವೆಬ್‌ ಸೈಟ್‌ಗಳನ್ನು ಹ್ಯಾಕ್‌ ಮಾಡುವಲ್ಲಿ ಶಾಮೀಲಾದ ಆರೋಪದ ಮೇಲೆ ದಿಲ್ಲಿ ಪೊಲೀಸರು ಇಬ್ಬರು ಕಾಶ್ಮೀರಿ ವಿದ್ಯಾರ್ಥಿಗಳನ್ನು ಪಂಜಾಬ್‌ನಲ್ಲಿ ಬಂಧಿಸಿದ್ದಾರೆ.

Advertisement

ಆರೋಪಿಗಳನ್ನು ಶಾಹಿದ್‌ ಮಲ್ಲಾ (ಪಂಜಾಬಿನ ರಾಜಪುರದ ಆರ್ಯನ್‌ ಗ್ರೂಪ್‌ ಆಫ್ ಕಾಲೇಜಿನ ಸಿಎಸ್‌ಇ ವಿದ್ಯಾರ್ಥಿ) ಮತ್ತು ಆದಿಲ್‌ ಹುಸೇನ್‌ ತೇಲಿ (ಜಾಲಂಧರ್‌ ನ ಸೈಂಟ್‌ ಸೋಲ್ಜರ್ ಮ್ಯಾನೇಜ್‌ಮೆಂಟ್‌ ಆ್ಯಂಡ್‌ ಟೆಕ್ನಿಕಲ್‌ ಇನ್‌ಸ್ಟಿಟ್ಯೂಟ್‌ ಇದರ ಬಿಸಿಎ ಅಂತಿಮ ವರ್ಷದ ವಿದ್ಯಾರ್ಥಿ) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಜಮ್ಮು ಕಾಶ್ಮೀರದ ಬಾರಾಮುಲ್ಲಾ ಮತ್ತು ಅನಂತ್‌ನಾಗ್‌ ಜಿಲ್ಲೆಯ ನಿವಾಸಿಗಳೆಂದು ಗೊತ್ತಾಗಿದೆ.

ಖಚಿತ ಮಾಹಿತಿಯ ಮೇರೆಗೆ ದಿಲ್ಲಿ ಪೊಲೀಸ್‌ ಸೈಬರ್‌ ದಳದವರು ಶಾಹಿದ್‌ ಮಲ್ಲಾ ಮತ್ತು ಹುಸೇನ್‌ ತೇಲಿಯನ್ನು ಪಂಜಾಬ್‌ನಲ್ಲಿನ ಬಾಡಿಗೆ ಮನೆಯೊಂದರಲ್ಲಿ ಬಂಧಿಸಿದರು ಎಂದು ಹಿರಿಯ ಪೊಲೀಸ್‌ ಅಧಿಕಾರಿ ಮಾಧ್ಯಮಕ್ಕೆ ತಿಳಿಸಿದ್ದಾರೆ. 

ತನಿಖೆಯ ವೇಳೆ ಇವರ ಆನ್‌ಲೈನ್‌ ಚಟುವಟಿಕೆಗಳು “ಟೀಂ ಹ್ಯಾಕರ್ಸ್‌ ಥರ್ಡ್‌ ಐ” ಎಂಬ ದೇಶ ವಿರೋಧಿ ಹ್ಯಾಕಿಂಗ್‌ ಸಮೂಹದ ಭಾಗವಾಗಿದ್ದವು ಎಂಬದು ಖಚಿತವಾಯಿತು. ಈ ಸಮೂಹವು ಸರಕಾರದ್ದೂ ಸೇರಿದಂತೆ ಐನೂರಕ್ಕೂ ಅಧಿಕ ಭಾರತೀಯ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next