ನವದೆಹಲಿ: ಟ್ರಾನ್ಸಿಸ್ಸಿಷನ್ ಹೋಲ್ಡಿಂಗ್ಸ್ ಸಂಸ್ಥೆ ಜಾಗತಿಕ “ಸ್ಮಾರ್ಟ್’ ಸರಣಿಯ ಎರಡು ನೂತನ ಇನ್ಫಿನಿಕ್ಸ್ ಮೊಬೈಲ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.
ಇತೀ¤ಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇನ್ಫಿನಿಕ್ಸ್ ಇಂಡಿಯಾ ಸಿಇಒ ಅನೀಶ್ ಕಪೂರ್ ಅವರು ಮಾತನಾಡಿ, ನಮ್ಮ ದೇಶ ತಂತ್ರಜ್ಞಾನದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ಅದಕ್ಕೆ ಅನುಗುಣವಾಗಿ ನಮ್ಮ ಸಂಸ್ಥೆಯಿಂದ ಸ್ಮಾರ್ಟ್-2 ಸರಣಿಯ 6ಕೆ ಮೊಬೈಲ್ ಆವಿಷ್ಕರಿಸಿ ಬಿಡುಗಡೆ ಮಾಡಿದ್ದೇವೆ ಎಂದರು.
ಈ ಫೋನ್‌ನಲ್ಲಿ 18:9 ಫುಲ್ ವ್ಯೂ ಡಿಸ್‌ಪ್ಲೇ, ಡ್ಯುಯೆಲಕ್ ಎಲ್‌ಇಡಿ ಫ್ಲಾಷ್‌ವುಳ್ಳ 8ಎಂಪಿ ಲೋ ಲೈಟ್ ಸೆಲ್ಫಿ ಕ್ಯಾಮೆರಾ ಹಾಗೂ ಡ್ಯುಯೆಲ್ ಸಿಮ್, ಡ್ಯುಯೆಲ್ ವೋಲ್ಟೆ (4ಜಿ ಮತ್ತು 4ಜಿ)ಯ ಫೇಸ್ ಅನ್‌ಲಾಕ್ ಸಿಸ್ಟಂ ಇದೆ. ದರ ಸಮರದ ಮಾರಾಟದಲ್ಲಿ ನಮ್ಮ ಮೊಬೈಲ್‌ಗಳು ಗ್ರಾಹಕರ ಕೈಗೆಟುವಂತಿವೆ.
5.45 ಇಂಚಿನ ಎಚ್‌ಡಿ ಪ್ಲಸ್ ಫುಲ್ ಡಿಸ್‌ಪ್ಲೇ ಇದಕ್ಕಿದೆ. ನೇತ್ರ ಸುರಕ್ಷೆಯ ಗುಣಗಳನ್ನು ಹೊಂದಿರುವ ಆಧುನಿಕ ಫೋನ್ ಇದಾಗಿದೆ. 128ಜಿಬಿ ವರೆಗೆ ವಿಸ್ತರಿಸಬಲ್ಲ ಮೆಮೋರಿ ಹಾಗೂ 3050ಎಂಎಎಚ್ ಬ್ಯಾಟರಿ ಸಾಮರ್ಥ್ಯವಿದ್ದು 4ಜಿ ಟಾಕ್ ಟೈಮ್‌ನಲ್ಲಿ 21 ಗಂಟೆಗಳವರೆಗೆ ಬಳಸಬಹುದಾಗಿದೆ.
ಇನ್ಫಿನಿಕ್ಸ್ ಎರಡು ವಿಧಗಳಲ್ಲಿದ್ದು 2ಜಿಬಿ ರ್ಯಾಮ್ ಪ್ಲಸ್ 16 ಜಿಬಿ ಸ್ಟೋರೇಜ್‌ನ ಮೊಬೈಲ್ 5,999 ರೂ.ಗಳಲ್ಲಿ ಹಾಗೂ 3ಜಿಬಿ ರ್ಯಾಮ್ 32ಜಿಬಿ ಸ್ಟೋರೇಜ್ ಫೋನ್ 6,999 ರೂ. ಬೆಲೆಗೆ ಲಭ್ಯವಿರುತ್ತದೆ. ಆ.10ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ನಾಲ್ಕು ಬಣ್ಣಗಳಲ್ಲಿ ದೊರೆಯಲಿದೆ ಎಂದು ಅವರು ತಿಳಿಸಿದರು.