Advertisement

ಥಾಣೆ ಪೊಲೀಸರಿಂದ ಇಬ್ಬರ ಬಂಧನ, 43,400 ರೂ. ನಕಲಿ ನೋಟು ವಶ

11:56 AM Mar 06, 2018 | Team Udayavani |

ಥಾಣೆ : 43.400 ರೂ. ಮೌಲ್ಯದ ನಕಲಿ ಕರೆನ್ಸಿ ನೋಟುಗಳನ್ನು ಹೊಂದಿದ್ದ ಓರ್ವ ಪುರುಷ ಹಾಗೂ ಓರ್ವ ಮಹಿಳೆಯನ್ನು ಥಾಣೆ ಪೊಲೀಸ್‌ ಕ್ರೈಮ್‌ ಬ್ರಾಂಚ್‌ ನವರು  ಬಂಧಿಸಿ ಅವರಿಂದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. 

Advertisement

47ರ ಹರೆಯದ ಮಹಿಳೆಯನ್ನು ಪೊಲೀಸರು ಉಲ್ಲಾಸನಗರ ಟೌನ್‌ಶಿಪ್‌ ನ ಗಜಾನನ ಮಾರ್ಕೆಟ್‌ ಬಳಿ ಬಂಧಿಸಿ ಆಕೆಯ ಬಳಿ ಇದ್ದ  ನೂರು ರೂ. ಮುಖಬೆಲೆಯ 110 ನಕಲಿ ನೋಟುಗಳನ್ನು ಮಾರ್ಚ್‌ 4ರಂದು ವಶಪಡಿಸಿಕೊಂಡರು. 

ಬಂಧಿತ ಮಹಿಳೆಯು ಕೊಟ್ಟ ಮಾಹಿತಿ ಪ್ರಕಾರ ಪೊಲೀಸರು 32ರ ಹರೆಯದ ವ್ಯಕ್ತಿಯೋರ್ವನನ್ನು ಬಂಧಿಸಿ ಉಲ್ಲಾಸನಗರದಲ್ಲಿನ ಆತನ ಮನೆಯಲ್ಲಿದ್ದ 100 ರೂ. ಗಳ 324 ನಕಲಿ ನೋಟುಗಳನ್ನು ವಶಪಡಿಸಿಕೊಂಡರು. ಜತೆಗೆ ಒಂದು ಸ್ಕ್ಯಾನರ್‌, ಒಂದು ಕಟ್ಟರ್‌ ಮತ್ತು ಕೆಲವು ಖಾಲಿ ಕಾಗದಗಳನ್ನು ಕೂಡ ವಶಪಡಿಸಿಕೊಂಡರು. 

ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next