Advertisement

ಅತ್ಯಾಚಾರಗೈದು ಮಹಿಳೆಯ ಸಜೀವ ದಹನ: ಇಬ್ಬರ ಬಂಧನ, ಮೂವರು ಭೂಗತ

05:28 PM Jul 16, 2018 | udayavani editorial |

ಸಂಭಾಲ್‌, ಉತ್ತರ ಪ್ರದೇಶ : ಸಂಭಾಲ್‌ ಜಿಲ್ಲೆಯ ರಾಜಾಪುರ ಪ್ರದೇಶದಲ್ಲಿ  30ರ ಹರೆಯದ ಓರ್ವ ವಿವಾಹಿತ ಮಹಿಳೆಯನ್ನು ರೇಪ್‌ ಮಾಡಿ ಬಳಿಕ ಆಕೆಯನ್ನು ಜೀವಂತ ಸುಟ್ಟ  ಪ್ರಕರಣದ ಐವರು ಆರೋಪಿಗಳಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಕಳೆದ ಶನಿವಾರ ಮಹಿಳೆಯನ್ನು ಆಕೆಯ ಮನೆಯಲ್ಲಿ ಐವರು ಕಾಮುಕರು ಅತ್ಯಾಚಾರ ಮಾಡಿದ ಬಳಿಕ ದೇವಳದ ಆವರಣದೊಳಗೆ ಆಕೆಯನ್ನು ಜೀವಂತ ಸುಟ್ಟಿದ್ದರು. 

ಈ ಘಟನೆಯ ಮುಖ್ಯ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ನಾಲ್ಕು ಪೊಲೀಸ್‌ ತಂಡಗಳನ್ನು ರಚಿಸಲಾಗಿದೆ. ಈ ತಂಡದವರು ವಿವಿಧ ಕಡೆಗಳಲ್ಲಿ ದಾಳಿ ನಡೆಸಿ ಇನ್ನುಳಿದ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಎಸ್‌ಪಿ ಆರ್‌ ಎಂ ಭಾರದ್ವಾಜ್‌ ಹೇಳಿದರು. ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಜೀವಂತ ಸುಟ್ಟ ಆರೋಪಿಗಳು ಆಕೆಯ ಸಂಬಂಧಿಕರೇ ಆಗಿದ್ದಾರೆ ಎಂದು ಭಾರದ್ವಾಜ್‌ ಹೇಳಿದರು. 

ಕಳದ ಶನಿವಾರ 30ರ ಹರೆಯದ ಸಂತ್ರಸ್ತ ಮಹಿಳೆಯು ತನ್ನ ಮನೆಯಲ್ಲಿ  ತನ್ನ ಮಗಳೊಂದಿಗೆ ಇದ್ದಾಗ ಐವರು ಆರೋಪಿಗಳು ನಸುಕಿನ 2.30ರ ಹೊತ್ತಿಗೆ ಮನೆಯನ್ನು ಪ್ರವೇಶಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದರು. ಆಕೆಯ ಪತಿ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next