ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಮತ್ತೆ ಡ್ರೋನ್ ಹಾರಾಟ ನಡೆಸಿರುವುದು ಪತ್ತೆಯಾಗಿದೆ. ಗುರುವಾರ ಸಂಜೆ ಸಾಂಬಾ ಮತ್ತು ಕಥುವಾ ಜಿಲ್ಲೆಗಳಲ್ಲಿ ತಲಾ ಒಂದು ಸಂಶಯಾತ್ಮಕ ಡ್ರೋನ್ ಗಳ ಹಾರಾಟ ಪತ್ತೆಯಾಗಿದೆ.
ಸಾಂಬಾದ ನಂದಾಪುರ ಗ್ರಾಮದ ಆರ್ಮಿ ಹೆಡಡ್ ಕ್ವಾರ್ಟರ್ಸ್ ನ ಪಕ್ಕದಲ್ಲಿ ಒಂದು ಡ್ರೋನ್ ಹಾರಾಟ ನಡೆಸಿದೆ. ಕೇವಲ ನಿಮಿಷದ ಕಾಲ ಈ ಡ್ರೋನ್ ಕಾಣಿಸಿಕೊಂಡಿದೆ ಎಂದು ವರದಿ ತಿಳಿಸಿದೆ. ನೆಲಮಟ್ಟದಿಂದ 200- 250 ಅಡಿ ಎತ್ತರದದಲ್ಲಿ ಡ್ರೋನ್ ಹಾರಾಟ ನಡೆಸಿದೆ. ಭದ್ರತಾ ಪಡೆಗಳು ಎಂಟು ಸುತ್ತು ಗುಂಡು ಹಾರಿಸಿದೆ ಎಂದು ವರದಿಯಾಗಿದೆ.
ಕಥುವಾ ಜಿಲ್ಲೆಯ ಹಿರಾನಗರ್ ಪ್ರದೇಶದಲ್ಲಿ ಮತ್ತೊಂದು ಡ್ರೋನ್ ಹಾರಾಟ ನಡೆಸಿರುವುದನ್ನು ಸ್ಥಳೀಯರು ಪತ್ತೆ ಮಾಡಿದ್ದಾರೆ. ಆದರೆ ಕೆಲವೇ ನಿಮಿಷದಲ್ಲಿ ಡ್ರೋನ್ ಮರೆಯಾಗಿದೆ.
ಇದನ್ನೂ ಓದಿ:ಡ್ರೋನ್ ನಿಯಮ ಸರಳಕ್ಕೆ ಕೇಂದ್ರ ಒಲವು
ಕಳೆದ ಬುಧವಾರವೂ ಲೈನ್ ಆಫ್ ಕಂಟ್ರೋಲ್ ನ ಪಲ್ಲಾನವಾಲ ಸೆಕ್ಟರ್ ಬಳಿ ರಾತ್ರಿ 9 ಗಂಟೆ ಸುಮಾರಿಗೆ ಒಂದು ಡ್ರೋನ್ ಪತ್ತೆಯಾಗಿದೆ. ಡ್ರೋನ್ ಕಂಡ ಭದ್ರತಾ ಸಿಬ್ಬಂದಿ ಅದರತ್ತ ಕೆಲವು ಸುತ್ತು ಗುಂಡು ಹಾರಿಸಿದ್ದಾರೆ. ಕೂಡಲೇ ಡ್ರೋನ್ ಪಾಕಿಸ್ಥಾನ ಗಡಿ ಭಾಗಕ್ಕೆ ತೆರಳಿದೆ.