Advertisement

ದ.ಕ.ದಲ್ಲಿ  ಶೇ.31.93ರಷ್ಟು ಮಂದಿಗೆ ಎರಡೂ ಡೋಸ್‌ ಲಸಿಕೆ ಪೂರ್ಣ

09:13 PM Aug 13, 2021 | Team Udayavani |

ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟು ತಿಂಗಳುಗಳಿಂದ ವಿವಿಧ ಹಂತಗಳಲ್ಲಿ ಕೋವಿಡ್‌ ನಿರೋಧಕ ಲಸಿಕೆ ಅಭಿಯಾನ ನಡೆಯುತ್ತಿದ್ದು, ಶೇ.31.93ರಷ್ಟು ಮಂದಿ ಎರಡೂ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ. ಶೇ.54.15ರಷ್ಟು ಮಂದಿಗೆ ಮೊದಲ ಡೋಸ್‌ ಲಸಿಕೆ ಪೂರ್ಣವಾಗಿದೆ.

Advertisement

ಜಿಲ್ಲೆಯಲ್ಲಿ ಹಿರಿಯ ನಾಗರಿಕರು ಅತೀ ಹೆಚ್ಚು ಮಂದಿ ಲಸಿಕೆ ಪಡೆದುಕೊಂಡಿದ್ದು, 60 ವರ್ಷ ಮೇಲ್ಪಟ್ಟ ಶೇ.96.80 ರಷ್ಟು ಮಂದಿ ಮೊದಲ ಡೋಸ್‌, ಶೇ.56.17ರಷ್ಟು ಮಂದಿ ಎರಡನೇ ಡೋಸ್‌ ಲಸಿಕೆ ಪಡೆದು ಕೊಂಡಿದ್ದಾರೆ. ಅದೇ ರೀತಿ, ಆರೋಗ್ಯ ಕಾರ್ಯಕರ್ತರಲ್ಲಿ ಶೇ.96.48ರಷ್ಟು ಮಂದಿ ಮೊದಲ ಡೋಸ್‌ ಮತ್ತು ಶೇ.68.44ರಷ್ಟು ಮಂದಿ 2ನೇ ಡೋಸ್‌ ಲಸಿಕೆ ಪಡೆದಿದ್ದಾರೆ.

ಮುಂಚೂಣಿ ಕಾರ್ಯಕರ್ತರಲ್ಲಿ ಶೇ.100ರಷ್ಟು ಮಂದಿ ಮೊದಲನೇ ಡೋಸ್‌ ಪಡೆದಿದ್ದು, ಶೇ. 51.68ರಷ್ಟು ಮಂದಿ ಎರಡನೇ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ. 18ರಿಂದ 44 ವರ್ಷದೊಳಗಿನ ಶೇ.37.57ರಷ್ಟು ಮಂದಿ ಮೊದಲ ಡೋಸ್‌, ಶೇ.9.20ರಷ್ಟು ಮಂದಿ ಎರಡನೇ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ. 45ರಿಂದ 60 ವರ್ಷದೊಳಗಿನ ಶೇ.70ರಷ್ಟು ಮಂದಿ ಮೊದಲ ಡೋಸ್‌, 40.38ರಷ್ಟು ಮಂದಿ ಎರಡನೇ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ.

1,77,7574 ಮಂದಿ ಟಾರ್ಗೆಟ್‌ :

ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯು ಒಟ್ಟಾರೆ 1,77,7574 ಮಂದಿ ಮೊದಲ ಡೋಸ್‌ ಟಾರ್ಗೆಟ್‌ ಇಟ್ಟುಕೊಂಡಿದ್ದು, 96,2577ಮಂದಿಗೆ ಮೊದಲ ಡೋಸ್‌ ಮತ್ತು 30,7439 ಮಂದಿಗೆ ಎರಡೂ ಡೋಸ್‌ ಲಸಿಕೆ ನೀಡಲಾಗಿದೆ. ಹತ್ತು ದಿನಗಳಲ್ಲಿ ಜಿಲ್ಲೆಯ ಲಸಿಕೆ ಕೇಂದ್ರಗಳಲ್ಲಿ ಕೋವಿಡ್‌ ರೋಗ ನಿರೋಧಕ ಲಸಿಕೆ ಅಭಿಯಾನ ನಡೆದಿದ್ದು, ಒಟ್ಟು 96,415 ಮಂದಿಗೆ ಲಸಿಕೆ ನೀಡಲಾಗಿದೆ.

Advertisement

ಜಿಲ್ಲೆಗೆ ಮತ್ತಷ್ಟು ಲಸಿಕೆ ನಿರೀಕ್ಷೆ  :

ದ.ಕ. ಜಿಲ್ಲೆಗೆ ರಾಜ್ಯ ಸರಕಾರದಿಂದ ಹತ್ತು ದಿನಗಳಲ್ಲಿ 67,000 ಡೋಸ್‌ ಲಸಿಕೆ ಬಂದಿದೆ. ಕೆಲವು ದಿನಗಳ ಹಿಂದೆ ತಿಂಗಳಲ್ಲಿ ಕೇವಲ 2 ಲಕ್ಷ ಡೋಸ್‌ ಲಸಿಕೆ ಬರುತ್ತಿತ್ತು. ಇದೀಗ ಲಸಿಕೆ ಸರಬರಾಜು ತುಸು ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ಆ. 10ರ ವರೆಗಿನ ಮಾಹಿತಿಯಂತೆ ಒಟ್ಟು 38,901 ಮಂದಿ ಎರಡನೇ ಡೋಸ್‌ ಲಸಿಕೆಗಾಗಿ ಕಾಯುತ್ತಿದ್ದಾರೆ. ಇದರಲ್ಲಿ 23,500 ಮಂದಿ ಕೊವಿಶೀಲ್ಡ್‌ ಮತ್ತು 15,401 ಮಂದಿ ಕೊವ್ಯಾಕ್ಸಿನ್‌ ಎರಡನೇ ಡೋಸ್‌ ಪಡೆಯಲು ಬಾಕಿ ಇದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಆರೋಗ್ಯ ಇಲಾಖೆ ಜತೆ ನಡೆಸಿದ ಸಭೆಯಲ್ಲಿ ಭರವಸೆ ನೀಡಿದ್ದು, ಅದರಂತೆ ದ.ಕ. ಜಿಲ್ಲೆಯು ಗಡಿ ಸಂಪರ್ಕ ಹೊಂದಿರುವುದರಿಂದ ಗಡಿಯ 10 ಕಿ.ಮೀ. ವ್ಯಾಪ್ತಿಯ ಜನರಿಗೆ ಎಷ್ಟು ಪ್ರಮಾಣ ಹೆಚ್ಚು ವರಿ ಲಸಿಕೆ ಬೇಕು ಎಂದು ತಿಳಿಸಿದರೆ ಒದಗಿಸಲಾಗುವುದು ಎಂದಿದ್ದರು. ಜಿಲ್ಲೆಗೆ ಆ. 9ರಂದು 17,550 ಡೋಸ್‌ ಲಸಿಕೆ ಬಂದಿದ್ದು, ಶನಿವಾರ ಕೂಡ 21,100 ಡೋಸ್‌ ಲಸಿಕೆ ಜಿಲ್ಲೆಗೆ ಸರಬರಾಜು ಆಗಲಿದೆ.

ಲಸಿಕೆಯ ಫ‌ಲಾನುಭವಿಗಳು :

ಫಲಾನುಭವಿಗಳು      ಗುರಿ     ಮೊದಲ ಡೋಸ್‌      ಎರಡನೇ ಡೋಸ್‌

ಆರೋಗ್ಯ ಕಾರ್ಯಕರ್ತರು    52,523 50,672 34,682

ಮುಂಚೂಣಿ ಕಾರ್ಯಕರ್ತರು           15,784 15,792 8,162

60 ವರ್ಷ ಮೇಲ್ಪಟ್ಟವರು       2,01,000         1,94,566         1,09,297

45-60 ವರ್ಷದವರು   4,16,123         2,91,279         1,17,613

18ರಿಂದ 44 ವರ್ಷ      10,92,144       4,10,268         37,739

ಒಟ್ಟು 17,77,574       9,62,577         3,07,439

ದ.ಕ. ಜಿಲ್ಲೆಯಲ್ಲಿ ಕೋವಿಡ್‌ ರೋಗ ನಿರೋಧಕ ಲಸಿಕೆ ಮೊದಲ ಡೋಸ್‌ ಶೇ.50ಕ್ಕೂ ಹೆಚ್ಚು ಮಂದಿಗೆ ನೀಡಲಾಗಿದ್ದು, ಶೇ.30ಕ್ಕೂ ಹೆಚ್ಚಿನ ಮಂದಿ ಎರಡೂ ಡೋಸ್‌ ಲಸಿಕೆ ಪಡೆದಿದ್ದಾರೆ. ಕೆಲವು ದಿನಗಳಿಂದ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪೂರೈಕೆಯಾಗುತ್ತಿದ್ದು, ಲಸಿಕೆ ಅಭಿಯಾನ ನಡೆಸಲಾಗುತ್ತಿದೆ. -ಡಾ| ರಾಜೇಶ್‌,  ಆರ್‌ಸಿಚ್‌ ಅಧಿಕಾರಿ, ದ.ಕ. ಜಿಲ್ಲಾ ಆರೋಗ್ಯ ಇಲಾಖೆ

 

Advertisement

Udayavani is now on Telegram. Click here to join our channel and stay updated with the latest news.

Next