Advertisement

ಅಲೆ ಅಬ್ಬರ; 2 ದಿನ ಮಳೆ?

08:11 AM May 11, 2019 | mahesh |

ಮಂಗಳೂರು/ಮಲ್ಪೆ: ಅರಬಿ ಸಮುದ್ರದಲ್ಲಿ ಉಂಟಾಗಿರುವ ನಿಮ್ನ ಒತ್ತಡದ ಪರಿಣಾಮ ರವಿವಾರದಿಂದ 2 ದಿನಗಳ ಕಾಲ ಕರಾವಳಿಯ ಅಲ್ಲಲ್ಲಿ ಸಾಧಾರಣ ಮಳೆಯಾಗುವ
ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಮುದ್ರದಲ್ಲಿ ಬಲವಾದ ಗಾಳಿ ಬೀಸುತ್ತಿರುವುದರಿಂದ ಅಲೆಗಳ ಅಬ್ಬರ ಹೆಚ್ಚಿದೆ. ಗುರುವಾರದಿಂದ ಅಲೆಗಳಲ್ಲಿ ವ್ಯತ್ಯಾಸ ಗೋಚರಿಸಿದ್ದು, ಶುಕ್ರವಾರ ಮತ್ತಷ್ಟು ಬಿರುಸುಗೊಂಡಿದೆ. ಆದರೆ
ಮೀನುಗಾರಿಕೆ ಬೋಟುಗಳು ವಾಪಸಾಗಿರುವ ವರದಿಯಾಗಿಲ್ಲ.

Advertisement

ಟೂರಿಸ್ಟ್‌ ಬೋಟ್‌ಯಾನ ಸ್ಥಗಿತ
ಅಲೆಗಳ ಏರಿಳಿತ ಹೆಚ್ಚಾಗಿದ್ದರಿಂದ ಶುಕ್ರವಾರ ಮಧ್ಯಾಹ್ನದ ಮೇಲೆ ಸೈಂಟ್‌ ಮೇರೀಸ್‌ ದ್ವೀಪಕ್ಕೆ ತೆರಳುವ ಟೂರಿಸ್ಟ್‌ ಬೋಟುಗಳ ಪ್ರಯಾಣವನ್ನು ನಿಲ್ಲಿಸಲಾಗಿತ್ತು. ಮಲ್ಪೆ ಬೀಚ್‌ನಲ್ಲೂ ಯಾವುದೇ ಜಲಸಾಹಸ ಕ್ರೀಡೆಗಳನ್ನು ನಡೆಸಲಾಗಲಿಲ್ಲ. ಹುಣ್ಣಿಮೆ ಸಮೀಪ ಅಲೆಗಳಲ್ಲಿ ಏರಿಳಿತ ಉಂಟಾಗುವುದು ಸಾಮಾನ್ಯ. ಹಾಗಾಗಿ ಇನ್ನೂ ನಾಲ್ಕೈದು
ದಿನಗಳವರೆಗೆ ಸಮುದ್ರದಲ್ಲಿ ಈ ವ್ಯತ್ಯಾಸ ಇರುವ ಸಾಧ್ಯತೆ ಇದೆ ಎಂದು  ಮೀನುಗಾರರು ತಿಳಿಸಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸಿ ವಾಟರ್‌ ಗೇಮ್ಸ್‌ ಮತ್ತು ಪ್ರವಾಸಿಗರನ್ನು ಸಮುದ್ರಕ್ಕೆ ಇಳಿಯಲು ಬಿಡಲಾಗುತ್ತಿದೆ ಎಂದು ಪಣಂಬೂರು ಬೀಚ್‌ ಅಭಿವೃದ್ಧಿ ನಿಗಮದ ಸಿಇಒ ಯತೀಶ್‌ ಬೈಕಂಪಾಡಿ ತಿಳಿಸಿದ್ದಾರೆ.

ಕಡಲ್ಕೊರೆತ ಸಾಧ್ಯತೆ: ಎಚ್ಚರಿಕೆ
ಕಾಸರಗೋಡು: ಮುಂದಿನ 24 ತಾಸುಗಳಲ್ಲಿ ತೀವ್ರ ಕಡಲ್ಕೊರೆತ ತಲೆ ದೋರುವ ಸಾಧ್ಯತೆಯಿದ್ದು, ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಕೂಡದೆಂದು ತಿರುವನಂತಪುರದ ಹವಾಮಾನ ನಿಗಾ ಕೇಂದ್ರ ಮುನ್ನೆಚ್ಚರಿಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next