Advertisement

ರಬಕವಿ-ಬನಹಟ್ಟಿಯಲ್ಲಿ 2 ದಿನಗಳ ಕಾಲ 144 ಕಲಂ ಜಾರಿ

05:48 PM Feb 09, 2022 | Team Udayavani |

ರಬಕವಿ-ಬನಹಟ್ಟಿ : ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವ ನಿಟ್ಟಿನಲ್ಲಿ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ರಬಕವಿ-ಬನಹಟ್ಟಿಯಲ್ಲಿ ಫೆ. 9 ಮಧ್ಯಾಹ್ನ 12 ಗಂಟೆಯಿಂದ ಫೆ. 11 ರ ಬೆಳ್ಳಿಗ್ಗೆ 6 ಗಂಟೆವರೆಗೆ 2 ದಿನಗಳ ಕಾಲ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ರಬಕವಿ-ಬನಹಟ್ಟಿ ತಹಶೀಲ್ದಾರ ಎಸ್. ಬಿ. ಇಂಗಳೆ ಅವರು ಬುಧವಾರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

ಬನಹಟ್ಟಿ ನಗರದಲ್ಲಿ ಫೆ. 8 ರಂದು ಬನಹಟ್ಟಿ ನಗರದ ಸರಕಾರಿ ಕಾಲೇಜಿನಲ್ಲಿ ಕೇಸರಿ ಶಾಲು ಹಾಗೂ ಜಿಜಾಬ ಬಗ್ಗೆ ಹಿಂದೂ ಮತ್ತು ಮುಸ್ಲಿಂ ಸಮುದಾಯದವರ ಮಧ್ಯೆ ಗಲಾಟೆ ಆಗಿ ಕ್ಲಲು ತೂರಾಟವಾಗಿ ರಬಕವಿ-ಬನಹಟ್ಟಿ ನಗರಗಳಲ್ಲಿ ಸೂಕ್ಷ ವಾತಾವರಣ ಸೃಷ್ಠಿಯಾಗಿದ್ದು, ಬುಧವಾರ ಹಿಂದೂಪರ ಸಂಘಟನೆಗಳು ಘಟನೆಯನ್ನು ಖಂಡಿಸಿ ಪ್ರತಿಭಟನೆ ಮಾಡುವ ಸಾಧ್ಯತೆಗಳು ಹೆಚ್ಚಾಗಿರುವ ಕಾರಣ ಸದರಿ ಪ್ರದೇಶದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾದ ಪ್ರಯುಕ್ತ ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯ ರಬಕವಿ,ಬನಹಟ್ಟಿ, ಹೊಸೂರ,ರಾಮಪುರ ಈ ಪ್ರದೇಶದಲ್ಲಿ ಯಾವುದೇ ತರಹ ಅಹಿತಕರ ಘಟನೆ ಸಂಭವಿಸದಂತೆ ನೋಡಿಕೊಳ್ಳುವ ಸಲುವಾಗಿ ಮುಂಜಾಗ್ರತಾ ಕ್ರಮವಾಗಿ ಫೆ. 9 ಮಧ್ಯಾಹ್ನ 12 ಗಂಟೆಯಿಂದ ಫೆ. 11 ರ ಬೆಳ್ಳಿಗ್ಗೆ 6 ಗಂಟೆವರೆಗೆ ಯಾವುದೇ ಸಮಾರಂಭ, ಯಾವುದೇ ಸಂಚಾರ ಸಾಗಾಣಿಕೆ ಮಾಡುವಂತಿಲ್ಲ. ಕಲ್ಲು ಕಟ್ಟಿಗೆ ಇತ್ಯಾದಿ ಆಯುಧಗಳನ್ನು ಹೊಂದಿರುವಂತಿಲ್ಲ. ಜನರು ಗುಂಪು ಗುಂಪಾಗಿ ಸೇರುವುದನ್ನು ಮತ್ತು ಇನ್ನೀತರೆ ಚಟುವಟಿಕೆಗಳಲ್ಲಿ ತೊಡಗುವುದನ್ನು ಸಹ ನಿಷೇದಿಸಿ. ಆದೇಶ ಹೊರಡಿಸಲಾಗಿದೆ. ಈ ಆದೇಶವು ಮದುವೆ, ಮುಂಜಿವೆ ಹಾಗೂ ಅಂತ್ಯ ಸಂಸ್ಕಾರಕ್ಕೆ ಅನ್ವಯವಾಗುವುದಿಲ್ಲ ಎಂದು ತಹಶೀಲ್ದಾರ ಇಂಗಳೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next