Advertisement

ಜಿಲ್ಲಾ ವಲಯ ಜೇನು ಸಾಕಾಣಿಕೆ ಯೋಜನೆಯಡಿ ರೈತರಿಗೆ ಎರಡು ದಿನಗಳ ಜೇನು ಕೃಷಿ ತರಬೇತಿ ಕಾರ್ಯಕ್ರಮ

06:23 PM Jan 16, 2020 | ganesh bhat |

2019-20ನೇ ಸಾಲಿನ ಜಿಲ್ಲಾ ವಲಯ ಜೇನು ಸಾಕಾಣಿಕೆ ಯೋಜನೆಯಡಿ ರೈತರಿಗೆ ಎರಡು ದಿನಗಳ ಜೇನು ಕೃಷಿ ತರಬೇತಿ ಕಾರ್ಯಕ್ರಮ ಉಡುಪಿ ತಾಲೂಕಿನ  ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ (ಜಿ.ಪಂ),ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರ, ದೊಡ್ಡಣಗುಡ್ಡೆ, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ: 16.01.2020 ರಂದು ನೆಡೆಯಿತು

Advertisement

ಶ್ರೀ ದಿನಕರ ಬಾಬು, ಮಾನ್ಯ ಅಧ್ಯಕ್ಷರು, ಜಿಲ್ಲಾ ಪಂಚಾಯತ್, ಉಡುಪಿ   ಶ್ರೀಮತಿ ಶೀಲಾ ಶೆಟ್ಟಿ ಮಾನ್ಯ ಉಪಾಧ್ಯಕ್ಷರು, ಜಿಲ್ಲಾ ಪಂಚಾಯತ್, ಉಡುಪಿ  ಶ್ರೀಮತಿ ನೀತಾ ಗುರುರಾಜ್ ಪೂಜಾರಿ, ಮಾನ್ಯ ಅಧ್ಯಕ್ಷರು, ತಾಲೂಕು ಪಂಚಾಯತ್, ಉಡುಪಿ  ಶ್ರೀಮತಿ ಭುವನೇಶ್ವರಿ, ಮಾನ್ಯ ತೋಟಗಾರಿಕೆ ಉಪನಿರ್ದೇಶಕರು, ಜಿಲ್ಲಾ ಪಂಚಾಯತ್, ಉಡುಪಿ, ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಪಿ.ಲಕ್ಷ್ಮಣ್ ನಾಯಕ್, ನಿವೃತ್ತ ಜೇನು ಕೃಷಿ ಪ್ರದರ್ಶಕರು, ಕಾರ್ಕಳ   ಹಾಗೂ  ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, , ಉಡುಪಿ ಭಾಗವಹಿಸಿದ್ದರು.

ಶ್ರೀ ದಿನಕರ ಬಾಬು, ಮಾನ್ಯ ಅಧ್ಯಕ್ಷರು, ಜಿಲ್ಲಾ ಪಂಚಾಯತ್, ಉಡುಪಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಜೇನು ಸಾಕಾಣಿಕೆ ಕಡಿಮೆ ಆಗುತ್ತಿದ್ದು, ತೋಟಗಾರಿಕೆ ಇಲಾಖೆಯಲ್ಲಿ ನೀಡುವ ತರಬೇತಿಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು.

ಶ್ರೀಮತಿ ಶೀಲಾ ಶೆಟ್ಟಿ ಮಾನ್ಯ ಉಪಾಧ್ಯಕ್ಷರು, ಜಿಲ್ಲಾ ಪಂಚಾಯತ್, ಉಡುಪಿ ಇವರು ಮುಖ್ಯ ಅತಿಥಿಯಾಗಿ ಮಾತನಾಡಿ ಜೇನು ಸಾಕಾಣಿಕೆಯನ್ನು ಅಳವಡಿಸಿಕೊಂಡು ಆದಾಯವನ್ನು ದ್ವಿಗುಣಗೊಳಿಸಬಹುದು ಎಂದು ತಿಳಿಸಿದರು.

ಶ್ರೀಮತಿ ಭುವನೇಶ್ವರಿ ಮಾನ್ಯ ತೋಟಗಾರಿಕೆ ಉಪನಿರ್ದೇಶಕರು, ಜಿಲ್ಲಾ ಪಂಚಾಯತ್, ಉಡುಪಿ, ಇವರು ಮುಖ್ಯ ಅತಿಥಿಯಾಗಿ ಮಾತನಾಡಿ ಇಲಾಖೆಯ ಜೇನು ಸಾಕಾಣಿಕೆ ಯೋಜನೆ ಬಗ್ಗೆ ತಿಳಿಸಿದರು.

Advertisement

ಶ್ರೀಮತಿ ನೀತಾ ಗುರುರಾಜ್ ಪೂಜಾರಿ, ಮಾನ್ಯ ಅಧ್ಯಕ್ಷರು, ತಾಲೂಕು ಪಂಚಾಯತ್, ಉಡುಪಿ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜೇನು ಸಾಕಾಣಿಕೆ ಹಾಗೂ ಇಲಾಖೆಯ ಯೋಜನೆಗಳ ಸದೂಪಯೋಗ  ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಲಕ್ಷ್ಮಣ್ ನಾಯ್ಕ್ ನಿವೃತ್ತ ಜೇನು ಕೃಷಿ ಪ್ರದರ್ಶಕರು ಕಾರ್ಕಳ ಇವರು ಜೇನು ಹುಳುಗಳ ವಿವಿಧ ಜಾತಿಯ ಬಗ್ಗೆ,ಜೇನು ಸಾಕಾಣಿಕೆ, ಜೇನು ಹುಳುಗಳ ಕುಟುಂಬ ನಿರ್ವಹಣೆ ಹಾಗೂ ಜೇನು ತುಪ್ಪ ತೆಗೆಯುವ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.

ಸಹಾಯಕ ತೋಟಗಾರಿಕೆ ಅಧಿಕಾರಿ ಶ್ರೀ ಶ್ರೀರಾಮ ಹೆಗಡೆ ಇವರು ಅತಿಥಿಗಳನ್ನು ಸ್ವಾಗತಿಸಿದರು.

ಸಹಾಯಕ ತೋಟಗಾರಿಕೆ  ನಿರ್ದೇಶಕರು  ಶ್ರೀ ವೆಂಕಟೀಶ್ ಇವರು ವಂದನಾರ್ಪಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next