Advertisement

ರಾಜಸ್ಥಾನದಲ್ಲಿ ಸಂಭ್ರಮೋಲ್ಲಾಸದ 2 ದಿನಗಳ ಒಂಟೆ ಉತ್ಸವ ಆರಂಭ

12:25 PM Jan 12, 2019 | Team Udayavani |

ಬಿಕಾನೇರ್‌ : ಇಂದಿಲ್ಲಿ ಆರಂಭಗೊಂಡ 2 ದಿನಗಳ ವಿಶ್ವ ಪ್ರಸಿದ್ಧ ಒಂಟೆ ಉತ್ಸವದ ಮೊದಲ ದಿನ ನೂರಾರು ವಿದೇಶೀಯರು ಸೇರಿದಂತೆ ಅಪಾರ ಸಂಖ್ಯೆಯ ದೇಶೀಯ ಪ್ರವಾಸಿಗರು ಭಾಗಿಗಳಾಗಿ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳ ಸವಿಯನ್ನು ಆಸ್ವಾದಿಸಿದರು. 

Advertisement

ಇಂದು ಬೆಳಗ್ಗೆ ಜುನಾಗಢ ಕೋಟೆಯಿಂದ ಆರಂಭವಾದ ಮೆರವಣಿಗೆಗೆ ಜಿಲ್ಲಾಧಿಕಾರಿ ಹಸಿರು ನಿಶಾನೆ ತೋರಿದರು. ಮೆರವಣಿಗೆಯು ಕರಣಿ ಸಿಂಗ್‌ ಸ್ಟೇಡಿಯಂ ತಲುಪಿದಾಗ ಅನೇಕ ಕಾರ್ಯಕರ್ತರು ರಾಜಸ್ಥಾನಿ ಜಾನಪದ ನೃತ್ಯ ಪ್ರದರ್ಶಿಸಿದರೆ ಆರ್ಮಿ ಬ್ಯಾಂಡ್‌ ನವರು ಉತ್ಸಾಹದಾಯಕ ವಾದ್ಯಗೋಷ್ಠಿ ಪ್ರಸ್ತುತಪಡಿಸಿದರು. 

ಒಂಟೆ ತುಪ್ಪಳ ತೆಗೆಯುವುದು, ವಿನ್ಯಾಸ ರೂಪಿಸುವುದು ಮತ್ತು ಒಂಟೆ ಅಲಂಕಾರವೇ ಮೊದಲಾದ ಆಕರ್ಷಕ ಕಾರ್ಯಕ್ರಮಗಳು ನಡೆದವು. ವಿದೇಶಿ ಪ್ರವಾಸಿಗರು ರಾಜಸ್ಥಾನೀ ಸಾಂಪ್ರದಾಯಿಕ ವೇಷಭೂಷಣಗಳಲ್ಲಿ ಸಂಭ್ರಮಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next