Advertisement

ಮಣಿಪುರ ಬಿಜೆಪಿ ಸಮ್ಮಿಶ್ರ ಸರಕಾರಕ್ಕೆ ಇನ್ನೂ ಇಬ್ಬರು ಕೈ ಶಾಸಕರು

12:14 PM Jul 17, 2017 | Team Udayavani |

ಇಂಫಾಲ : ಇನ್ನೂ ಇಬ್ಬರು ಕಾಂಗ್ರೆಸ್‌ ಶಾಸಕರು ಆಳುವ ಬಿಜೆಪಿಯನ್ನು ಸೇರುವುದರೊಂದಿಗೆ 60 ಸದನ ಬಲದ ಮಣಿಪುರ ವಿಧಾನಸಭೆಯಲ್ಲೀಗ, ಚೊಚ್ಚಲ ಬಿಜೆಪಿ ನೇತೃತ್ವದ  ಸಮ್ಮಿಶ್ರ ಸರಕಾರದ ಬಲ 40ಕ್ಕೇರಿದೆ. 

Advertisement

ಕಾಂಗ್ರೆಸ್‌ ಶಾಸಕರಾದ ಕ್ಷೇತ್ರಿಮಾಯೂಮ್‌ ಬಿರೇನ್‌ ಸಿಂಗ್‌ ಮತ್ತು ಪೂನಮ್‌ ಬ್ರೋಜೇನ್‌ ಅವರು ಮೊನ್ನೆ ಶನಿವಾರ ಬಿಜೆಪಿಯನ್ನು ಸೇರುವುದರೊಂದಿಗೆ ಬಿಜೆಪಿ ಶಾಸಕರ ಸಂಖ್ಯೆ 31ಕ್ಕೇರಿತು ಎಂದು ಸಂಪರ್ಕ ಸಚಿವ ಬಿಶ್ವಜಿತ್‌ ಸಿಂಗ್‌ ಹೇಳಿದರು. 

ಮಣಿಪುರ ವಿಧಾನಸಭೆಯಲ್ಲೀಗ 31 ಬಿಜೆಪಿ ಶಾಸಕರು, ನಾಲ್ವರು ನಾಗಾ ಪೀಪಲ್ಸ್‌ ಫ್ರಂಟ್‌ (ಎನ್‌ಪಿಎಫ್), ನಾಲ್ವರು ನ್ಯಾಶನಲಿಸ್ಟ್‌ ಪೀಪಲ್‌ ಪಾರ್ಟಿ ಮತ್ತು ಓರ್ವ ಪಕ್ಷೇತರ ಶಾಸಕ, ಎನ್‌ ಬಿರೇನ್‌ ಸಿಂಗ್‌ ನೇತೃತ್ವದ ಬಿಜೆಪಿ ಸಮ್ಮಿಶ್ರ ಸರಕಾರದಲ್ಲಿ ಇದ್ದಾರೆ. 

2017ರ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ 28 ಕಾಂಗ್ರೆಸ್‌ ಶಾಸಕರ ಪೈಕಿ ಈಗ ಎಂಟು ಮಂದಿ ಶಾಸಕರು ಬಿಜೆಪಿ ಸೇರಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next