Advertisement

ಸಂಜಯನಗರದಲ್ಲಿ ಇಬ್ಬರು ಮಕ್ಕಳು ನಾಪತ್ತೆ

11:03 AM Oct 27, 2017 | Team Udayavani |

ಬೆಂಗಳೂರು: ಆಟವಾಡಿಕೊಂಡಿದ್ದ ಇಬ್ಬರು ಮಕ್ಕಳು ನಾಪತ್ತೆಯಾಗಿರುವ ಘಟನೆ ಸಂಜಯನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ. ಭೂಪಸಂದ್ರ ಮುಖ್ಯರಸ್ತೆಯ 6ನೇ ಕ್ರಾಸ್‌ ನಿವಾಸಿಗಳಾದ ಪ್ರಶಾಂತ್‌, ಶೈಲಜಾ ದಂಪತಿಯ ಮಕ್ಕಳಾದ ನಮ್ರತಾ (7), ನಮಿತ್‌ (5) ಕಾಣೆಯಾಗಿರುವ ಮಕ್ಕಳು.

Advertisement

ಬುಧವಾರ ಸಂಜೆ 7.30ರ ಸುಮಾರಿಗೆ ಭೂಪಸಂದ್ರ ಮುಖ್ಯರಸ್ತೆಯ 5ನೇ ಕ್ರಾಸ್‌ನಲ್ಲಿ ಮಕ್ಕಳ ಅಜ್ಜ ಎಳನೀರು ವ್ಯಾಪಾರ ಮಾಡುತ್ತಿದ್ದರು. ಈ ವೇಳೆ ಮಕ್ಕಳೊಂದಿಗೆ ಪೇಪರ್‌ ಹಾರಿಸುವ ವ್ಯಕ್ತಿಯೊಬ್ಬ ಮಕ್ಕಳೊಂದಿಗೆ ಆಟವಾಡುತ್ತಿದ್ದನು ಎನ್ನಲಾಗಿದ್ದು, ಕೆಲವು ಸಮಯದ ನಂತರ ಮಕ್ಕಳೊಂದಿಗೆ ಆತನೂ ನಾಪತ್ತೆಯಾಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವ ದೃಷ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂಬ ಮಾಹಿತಿ ಇದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಮೂವರ ಮೇಲೆ ಶಂಕೆ: ಪ್ರಕರಣದ ಬಗ್ಗೆ ಮೂವರ ಬಗ್ಗೆ ಶಂಕೆ ಇದೆ. ಸಿಸಿ ಟಿವಿ ಕ್ಯಾಮರಾದಲ್ಲಿ ಕೇವಲ ಮಕ್ಕಳು ಮಾತ್ರ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ.

ಅದು ಬಿಟ್ಟರೆ ಬೇರೆ ಯಾರು ನಿಂತಿರುವ ಅಥವಾ ಓಡಾಡಿದ ದೃಶ್ಯಗಳಲ್ಲ. ಅದಾಗ್ಯೂ ಅನುಮಾನಸ್ಪದರನ್ನು ವಿಚಾರಣೆಗೊಳಪಡಿಸಲಾಗುತ್ತಿದ್ದು, ಕುಟುಂಬದ ಸದಸ್ಯರನ್ನು ಕರೆದು ಹೆಚ್ಚಿನ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next