ಬಾರಾಮುಲ್ಲಾ; ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಸೇನೆಯು ಭಾನುವಾರ (ಸೆಪ್ಟೆಂಬರ್ 13) ಪೂಂಚ್ ಜಿಲ್ಲೆಯ ಮೆಂಧರ್ ನಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಇಬ್ಬರನ್ನು ಬಂಧಿಸಿ, ಭಾರೀ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ.
ಬಂಧಿತರಿಂದ ಮೂರು ಚೈನಾ ಪಿಸ್ತೂಲ್, ಆರು ಮ್ಯಾಗಜೈನ್ ಗಳು, 70 ಪಿಸ್ತೂಲ್ ಸುತ್ತುಗಳು, 11 ಹ್ಯಾಂಡ್ ಗ್ರೆನೇಡ್ ಮತ್ತು ಐಇಡಿ ತಯಾರಿಸಲು ಬಳಸುವ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದೆ.
ಶನಿವಾರವಷಷ್ಟೇ ಓರ್ವ ಉಗ್ರನನ್ನು ಮತ್ತು ಭೂಗತವಾಗಿ ಉಗ್ರರಿಗೆ ಸಹಾಯ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿತ್ತು. ಮಾತ್ರವಲ್ಲದೆ ಇವರಿಂದ ಒಂದು ಚೈನಾ ಪಿಸ್ತೂಲ್, 12 ಸುತ್ತಿನ ಎಂಎಂ ಪಿಸ್ತೂಲ್, ಒಂದು ಚೈನೀಸ್ ಗ್ರೆನೇಡ್ ಮುಂತಾದ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಸೆಪ್ಟೆಂಬರ್ 11 ರಂದು ಕೂಡ ಬಾರಾಮುಲ್ಲಾ ಜಿಲ್ಲೆಯಲ್ಲಿ ಲಷ್ಕರ್-ಎ-ತ್ಯೋಬಾ (ಎಲ್‌ಇಟಿ) ಗೆ ಸಂಬಂಧ ಹೊಂದಿದ್ದ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಬಂಧಿಸಿವೆ.