Advertisement

ಗುಜರಾತ್‌: ಬಂಧಿತ ಉಗ್ರ ಸಹೋದರರಿಗೆ 12 ದಿನ ಪೊಲೀಸ್‌ ಕಸ್ಟಡಿ

04:49 PM Feb 27, 2017 | Team Udayavani |

ರಾಜ್‌ಕೋಟ್‌: ಗುಜರಾತ್‌ನ ವಿವಿಧ ಧಾರ್ಮಿಕ ತಾಣಗಳಲ್ಲಿ ಒಂಟಿ ತೋಳ ಉಗ್ರ ದಾಳಿ ನಡೆಸುವ ಸಂಚು ರೂಪಿಸಿದ್ದ ಹಾಗೂ ಐಸಿಸ್‌ ಉಗ್ರ ಸಂಘಟನೆಯ ಜತೆಗೆ ನಂಟು ಹೊಂದಿದ್ದರೆನ್ನಲಾಗಿದ್ದ, ನಿನ್ನೆ ಭಾನುವಾರ ಬಂಧಿತರಾಗಿದ್ದ ಇಬ್ಬರು ಸಹೋದರರನ್ನು ಇಲ್ಲಿನ ಮ್ಯಾಜಿಸ್ಟ್ರೇಟರ ಕೋರ್ಟ್‌ 12 ದಿನಗಳ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ.

Advertisement

ವಸೀಮ್‌ ರಮೋದಿಯ ಮತ್ತು ಆತನ ಸಹೋದರ ನಯೀಮ್‌ ನನ್ನು ಗುಜರಾತ್‌ ಎಟಿಎಸ್‌ ತಂಡದವರು ನಿನ್ನೆ  ಅನುಕ್ರಮವಾಗಿ ರಾಜ್‌ಕೋಟ್‌ ಮತ್ತು ಭಾವನಗರದಲ್ಲಿ ಬಂಧಿಸಿದ್ದರು. 

ಬಂಧಿತರು ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯಲ್ಲಿನ ಛೋಟಿಲಾದಲ್ಲಿನ ಪ್ರಸಿದ್ಧ ದೇವಸ್ಥಾನವೊಂದರ ಮೇಲೆ ಉಗ್ರ ದಾಳಿ ನಡೆಸುವ ಸಂಚು ರೂಪಿಸಿದ್ದರು. ಮಾತ್ರವಲ್ಲದೆ ಇನ್ನೂ ಹಲವಾರು ಧಾರ್ಮಿಕ ತಾಣಗಳ ಮೇಲೆ ಉಗ್ರ ದಾಳಿ ನಡೆಸುವ ಯೋಜನೆ ಇವರದ್ದಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next