ಉಳ್ಳಾಲ: ದೇರಳಕಟ್ಟೆ ಶ್ರೀ ಅಯ್ಯಪ್ಪ ದೇವಸ್ಥಾನಕ್ಕೆ ನುಗ್ಗಿ ನಗದು ಕಳವು ಮಾಡಿದ ಆರೋಪದಡಿ ಇಬ್ಬರನ್ನು ಇಂದು ಕೊಣಾಜೆ ಪೊಲೀಸರು ಬಂಧನಕ್ಕೆ ಒಳಪಡಿಸಿದ್ದಾರೆ.
ತಲಪಾಡಿ ಕೆ.ಸಿ ರೋಡ್ ಮೂಲದ ಮಹಮ್ಮದ್ ಆಶ್ರಫ್ ಮತ್ತು ನಿಝಾಂ ಬಂಧಿತ ಆರೋಪಿಗಳು.
ಇದನ್ನೂ ಓದಿ:ಅಧಿಕಾರಿಗಳ ಎದುರಿಗೆ ಆತ್ಮಹತ್ಯೆಗೆ ಯತ್ನಿಸಿದ ಪುರಸಭೆ ಪೌರ ಕಾರ್ಮಿಕ!
ಜ.15 ರಂದು ದೇರಳಕಟ್ಟೆ ಅಯ್ಯಪ್ಪ ದೇವಸ್ಥಾನದಲ್ಲಿ ಕಳ್ಳತನ ನಡೆಸಲಾಗಿತ್ತು. ಘಟನೆ ನಡೆದು ವಾರ ಕಳೆದರೂ ಕಳ್ಳರ ಬಂಧನವಾಗಿಲ್ಲ ಎಂದು ಸೋಮವಾರ ತೊಕ್ಕೊಟ್ಟು ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ನಡೆದಿತ್ತು.
ಇದನ್ನೂ ಓದಿ: ಬ್ಯಾರಿಕೇಡ್ ಮುರಿದವರು ನಾವಲ್ಲ : ಸಂಯುಕ್ತ ಕಿಸಾನ್ ಮೋರ್ಚಾ
ಇದರ ಬೆನ್ನಲ್ಲೇ ದೇವಸ್ಥಾನಕ್ಕೆ ನುಗ್ಗಿದ ಕಳ್ಳರಿಬ್ಬರ ಬಂಧಿಸಲಾಗಿದೆ.ಕೊಣಾಜೆ ಪೊಲೀಸರಿಂದ ಇಬ್ಬರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.