ಮುಜಫರನಗರ, ಉತ್ತರ ಪ್ರದೇಶ : ಮಿರಾನ್‌ಪುರ ಪಟ್ಟಣಕ್ಕೆ ಸಮೀಪ ಇಬ್ಬರು ಶಂಕಿತ ಶಸ್ತ್ರಾಸ್ತ್ರ ಪೂರೈಕೆದಾರರನ್ನು ಪೊಲೀಸರು ಬಂಧಿಸಿದ್ದು ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಚುನಾವಣಾ ಶಿಸ್ತು ಉಪಕ್ರಮದ ಭಾಗವಾಗಿ ಪೊಲೀಸರು ಕೈಗೊಂಡ ಶೋಧ ಕಾರ್ಯಾಚರಣೆಯಲ್ಲಿ ಆರೋಪಿಗಳಾದ ದಿಲ್‌ಶದ ಮತ್ತು ಸಾನೇವಾರ್ ಎಂಬ ಇಬ್ಬರು ಶಂಕಿತರನ್ನು ಬಂಧಿಸಿದರು ಎಂದು ಎಸ್‌ಎಸ್‌ಪಿ ಸುಧೀರ್ ಕುಮಾರ್ ತಿಳಿಸಿದರು.
ಆರೋಪಿಗಳಿಂದ 9 ಮಸ್ಕೆಟ್ ಗನ್‌ಗಳು, ಐದು ಪಿಸ್ತೂಲುಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜತೆಗೆ ಎರಡು ನಕಲಿ ಗುರುತು ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಎಸ್‌ಪಿ ತಿಳಿಸಿದರು.