Advertisement

Kota; ಇಂಜೆಕ್ಷನ್‌ ಪಡೆದ ಬಳಿಕ ಜ್ವರ: ಎರಡೂವರೆ ತಿಂಗಳ ಶಿಶು ಸಾವು

07:38 AM Jan 14, 2025 | Team Udayavani |

ಕೋಟ: ಇಂಜೆಕ್ಷನ್‌ ಹಾಕಿಸಿದ ಬಳಿಕ ಜ್ವರದಿಂದ ಎರಡೂವರೆ ತಿಂಗಳ ಮಗು ಅಸ್ವಸ್ಥಗೊಂಡು ಸಾವನ್ನಪ್ಪಿದ ಘಟನೆ ಯಡಾಡಿ-ಮತ್ಯಾಡಿಯ ನಾಲ್ತೂರು ಗುಡ್ಡೆಯಂಗಡಿಯಲ್ಲಿ ಜ. 13ರಂದು ಸಂಭವಿಸಿದೆ.

Advertisement

ಇಲ್ಲಿನ ನಿವಾಸಿ ಗುರುರಾಜ್‌ ಅವರ ಗಂಡು ಮಗುವಿಗೆ ಜ. 10ರಂದು ಎರಡೂವರೆ ತಿಂಗಳ ಇಂಜೆಕ್ಷನ್‌ ಕೊಡಿಸಲಾಗಿತ್ತು. ಸಂಜೆ ವೇಳೆಗೆ ಜ್ವರ ಬಂದಿದ್ದು ಔಷಧ ನೀಡಿದಾಗ ಸ್ವಲ್ಪ ಕಡಿಮೆ ಆಗಿತ್ತು.

ಜ. 13ರಂದು ಮತ್ತೆ ಜ್ವರ ಉಲ್ಬಣಿಸಿದ್ದರಿಂದ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮಗು ಮೃತಪಟ್ಟಿದೆ. ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.