ನವದೆಹಲಿ: ಅತ್ಯಾಚಾರಕ್ಕೊಳಗಾಗದ ಬಾಲಕಿಯ ಮನೆಯವರ ಫೋಟೊ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವಿಟರ್ ಖಾತೆಯನ್ನು ತಾತ್ಕಾಲಿಕವಾಗಿ ಸಸ್ಪೆಂಡ್ ಮಾಡಿದ್ದ ಒಂದು ವಾರದ ನಂತರ ರಾಹುಲ್ ಖಾತೆಯನ್ನು ಶನಿವಾರ (ಆಗಸ್ಟ್ 14) ಅನ್ ಲಾಕ್ ಮಾಡಿದೆ.
ಇದನ್ನೂ ಓದಿ: ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಚರ್ಚೆ ಬೇಡ: ಹಾಲಪ್ಪ ಆಚಾರ್
“ರಾಹುಲ್ ಗಾಂಧಿ ಸೇರಿದಂತೆ ಎಲ್ಲಾ ಕಾಂಗ್ರೆಸ್ ಮುಖಂಡರ ಟ್ವಿಟರ್ ಖಾತೆಯನ್ನು ಅನ್ ಲಾಕ್ ಮಾಡಲಾಗಿದೆ. ಆದರೆ ರದ್ದು ಮಾಡಿದ್ದ ಟ್ವಿಟರ್ ಖಾತೆಯನ್ನು ಪುನಃ ಅನ್ ಲಾಕ್ ಮಾಡಿರುವುದಕ್ಕೆ ಟ್ವಿಟರ್ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ “ ಎಂದು ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ಖಾತೆಯ ರೋಹನ್ ಗುಪ್ತಾ ಎನ್ ಡಿಟಿವಿಗೆ ತಿಳಿಸಿದ್ದಾರೆ. ರಾಹುಲ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರ ಖಾತೆಯನ್ನು ಅನ್ ಲಾಕ್ ಮಾಡಿರುವುದಕ್ಕೆ ಸತ್ಯಮೇವ ಜಯತೇ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಟ್ವಿಟರ್ ತಮ್ಮ ಖಾತೆಯನ್ನು ಡಿಲೀಟ್ ಮಾಡಿಲ್ಲ ಎಂದು ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಿದೆ. ಅತ್ಯಾಚಾರಕ್ಕೊಳಗಾಗದ ಬಾಲಕಿಯ ಮನೆಯವರ ಫೋಟೊವನ್ನು ರಾಹುಲ್ ಗಾಂಧಿ ಟ್ವೀಟ್ ಮಾಡಿರುವುದು ಹೊಸ ಐಟಿ ಕಾಯ್ದೆಯನ್ನು ಉಲ್ಲಂಘಿಸಿದಂತಾಗಿದೆ ಎಂದು ಟ್ವಿಟರ್ ಕ್ರಮ ತೆಗೆದುಕೊಂಡಿತ್ತು.
ತಮ್ಮ ಟ್ವಿಟರ್ ಖಾತೆಯನ್ನು ರದ್ದುಪಡಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ರಾಹುಲ್ ಗಾಂಧಿ, ಭಾರತದ ರಾಜಕೀಯ ವಿದ್ಯಮಾನಗಳಲ್ಲಿ ಟ್ವಿಟರ್ ಹಸ್ತಕ್ಷೇಪ ಮಾಡುತ್ತಿದೆ. ನನ್ನ ಟ್ವಿಟರ್ ಖಾತೆ ವಿರುದ್ಧ ಕ್ರಮ ತೆಗೆದುಕೊಳ್ಳುವ ಮೂಲಕ ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಧಕ್ಕೆ ತಂದಿರುವುದಾಗಿ ಆಕ್ಷೇಪಿಸಿದ್ದರು. ತಮ್ಮ ಈ ಹೇಳಿಕೆಯನ್ನು ಯೂ ಟ್ಯೂಬ್ ಮೂಲಕ ಬಿಡುಗಡೆ ಮಾಡಿದ್ದರು.