Advertisement

ಟ್ವಿಟ್ಟರ್ ನಲ್ಲಿ ಬಂದಿದೆ ವಾಯ್ಸ್ ಫೀಚರ್: ವಿಶೇಷತೆಗಳೇನು ಗೊತ್ತಾ ?

03:44 PM Jun 18, 2020 | Mithun PG |

ನ್ಯೂಯಾರ್ಕ್: ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಟ್ವಿಟ್ಟರ್ ಹೊಸ ಹೊಸ ಫೀಚರ್ ಗಳನ್ನು ಬಳಕೆಗೆ ತರುತ್ತಿದ್ದು ಇದೀಗ ‘ವಾಯ್ಸ್ ಟ್ವೀಟ್” ಅನ್ನು ಪರೀಕ್ಷೆಗೆ ಒಳಪಡಿಸಿದೆ.

Advertisement

ಬುಧವಾರ(17-06-2020) ರಂದು 140 ಸೆಕೆಂಡುಗಳ ವಾಯ್ಸ್ ಫೀಚರ್ ಅನ್ನು ಪರೀಕ್ಷೆಗೊಳಪಡಿಸಿದ್ದು, ಇನ್ನು ಮುಂದೆ ವಾಯ್ಸ್ ಮೂಲಕ ಟ್ವೀಟ್ ಮಾಡುವ ಅವಕಾಶ ಲಭ್ಯವಾಗಲಿದೆ. ಸದ್ಯ ಈ ಫೀಚರ್ ಆ್ಯಪಲ್ ಐಓಎಸ್ ನ ನಿರ್ದಿಷ್ಟ ಬಳಕೆದಾರರಿಗೆ  ಮಾತ್ರ ಲಭ್ಯವಿದ್ದು, ಮುಂದಿನ ಕೆಲವು ವಾರಗಳಲ್ಲಿ ಹಲವು ಐಓಎಸ್ ಬಳಕೆದಾರರಿಗೆ ದೊರಕಲಿದೆ ಎಂದು ಟ್ವಿಟ್ಟರ್ ತನ್ನ ಬ್ಲಾಗ್ ನಲ್ಲಿ ತಿಳಿಸಿದೆ.

ಬಳಕೆದಾರರು ಟ್ವೀಟ್ ಕಂಫೋಸರ್ ಸ್ಕ್ರೀನ್ ನಲ್ಲಿರುವ ‘ವೇವ್ ಲೆಂಥ್’  ಐಕಾನ್ ಕ್ಲಿಕ್ ಮಾಡಿ 140 ಸೆಕೆಂಡ್ ಗಳ ವಾಯ್ಸ್ ಟ್ವೀಟ್ ಮಾಡಬಹುದು.

ಟ್ವಿಟ್ಟರ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ನೀತಿ ನಿಯಮಗಳ ಉಲ್ಲಂಘನೆಯಾಗುತ್ತಿದೆ. ಇದನ್ನು ಗಮನದಲ್ಲಿರಿಸಿಕೊಂಡು ವಾಯ್ಸ್ ಟ್ವೀಟ್ ಅನ್ನು ಹಲವು ಬಾರಿ ಮೇಲ್ವಿಚಾರಣೆ ಮಾಡಿ ಸಮರ್ಪಕವಾಗಿ ಬಳಕೆಗೆ ತರಲಾಗುವುದು. ಮಾತ್ರವಲ್ಲದೆ ಯಾವುದಾದರೂ ವಾಯ್ಸ್ ಟ್ವೀಟ್ ರಿಪೋರ್ಟ್  ಆದರೇ ನಮ್ಮ ನಿಯಮಗಳಿಗೆ ಅನುಸಾರವಾಗಿ ಪರಿಶೀಲಿಸುತ್ತೇವೆ ಮತ್ತು ಪ್ರತ್ಯೇಕ ಲೇಬಲ್ ಅಳವಡಿಸಲಾಗುವುದು  ಎಂದು ಟ್ವಿಟ್ಟರ್ ವಕ್ತಾರರೊಬ್ಬರು ರಾಯ್ ಟರ್ಸ್ ಗೆ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next