Advertisement

ಡೊನಾಲ್ಡ್ ಟ್ರಂಪ್ ಖಾತೆಯನ್ನು ಶಾಶ್ವತವಾಗಿ ರದ್ದು ಮಾಡಿದ ಟ್ವಿಟ್ಟರ್ ಸಂಸ್ಥೆ

08:56 AM Jan 09, 2021 | Team Udayavani |

ವಾಷಿಂಗ್ಟನ್ ಡಿಸಿ: ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು ಟ್ವಿಟ್ಟರ್ ಸಂಸ್ಥೆ ಶಾಶ್ವತವಾಗಿ ರದ್ದುಗೊಳಿಸಿದೆ.

Advertisement

ವಾಷಿಂಗ್ಟನ್​ ಡಿಸಿಯಲ್ಲಿನ ಕ್ಯಾಪಿಟಲ್​ ಹಿಲ್​ನಲ್ಲಿ ಎರಡು ದಿನಗಳ ಹಿಂದೆ ನಡೆದ ​ ಟ್ರಂಪ್ ಬೆಂಬಲಿಗರ ಹಿಂಸಾಚಾರಕ್ಕೆ ವ್ಯಾಪಕ ಖಂಡನೆ ವ್ಯಕ್ತವಾದ ಬೆನ್ನಲ್ಲೇ​ ಟ್ವಿಟರ್​ ಶಾಶ್ವತವಾಗಿ ಟ್ರಂಪ್​ ಖಾತೆಯನ್ನು ತೆಗೆದುಹಾಕಿದೆ.

ಪೂರ್ಣ ಹತೋಟಿಗೆ ಬಂದಿರುವ ಹಿಂಸಾಚಾರವನ್ನು ಟ್ರಂಪ್ ಅವರು ತಮ್ಮ ಟ್ವೀಟ್ ಗಳಿಂದ ಮತ್ತಷ್ಟು ಪ್ರಚೋದಿಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಟ್ರಂಪ್​ ಖಾತೆಯನ್ನು ಶಾಶ್ವತವಾಗಿ ತೆಗೆದು ಹಾಕಲಾಗಿದೆ ಎಂದು ಟ್ವಿಟರ್ ಸಂಸ್ಥೆ ತಿಳಿಸಿದೆ.

ಕಳೆದ ಬುಧವಾರ ಟ್ರಂಪ್‌ ಬೆಂಬಲಿಗರು ಹಿಂಸಾಚಾರ ನಡೆಸಿದ ಬಳಿಕ ಟ್ರಂಪ್‌ ಖಾತೆಯನ್ನು 12 ತಾಸು ಅಮಾನತಿನಲ್ಲಿಡಲಾಗಿತ್ತು.


ಈ ನಡುವೆ ಜೋ ಬೈಡೆನ್​ ಅವರ ಗೆಲುವನ್ನು ಪ್ರಮಾಣೀಕರಿಸಲಾಗಿದ್ದು, ಜನವರಿ 20ರಂದು ಬೈಡೆನ್​ ನೂತನ ಅಧ್ಯಕ್ಷರಾಗಿ ಪ್ರಮಾಣ ಸ್ವೀಕಾರ ಮಾಡಲಿದ್ದಾರೆ. ತಾನು ಈ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಆದರೂ ಅಧಿಕಾರ ಹಸ್ತಾಂತರ ಮಾಡುತ್ತೇನೆ ಎಂದು ಟ್ರಂಪ್ ಹೇಳಿಕೆ ನೀಡಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next