Advertisement

ಪಾಸ್‌ವರ್ಡ್‌ ಬದಲಿಸಿ

06:00 AM May 05, 2018 | Team Udayavani |

ಸ್ಯಾನ್‌ಫ್ರಾನ್ಸಿಸ್ಕೋ: ಡೇಟಾ ಗೌಪ್ಯತೆ ವಿಚಾರ ಇತ್ತೀಚೆಗೆ ಭಾರಿ ಚರ್ಚೆಗೊಳಗಾಗುತ್ತಿರುವ ಮಧ್ಯೆಯೇ, ಸಾಮಾಜಿಕ ಅಂತರ್ಜಾಲ ತಾಣ ಟ್ವಿಟರ್‌ ಇದೀಗ ತನ್ನ ಬಳಕೆದಾರರಿಗೆ ಪಾಸ್‌ವರ್ಡ್‌ ಬದಲಿಸಿಕೊಳ್ಳುವಂತೆ ಸೂಚಿಸಿದೆ. ಪಾಸ್‌ವರ್ಡ್‌ ಹಾಗೂ ಲಾಗಿನ್‌ ಮಾಹಿತಿಗಳು ಬಹಿರಂಗಗೊಂಡು ಒಂದೆಡೆ ಸೇವ್‌ ಆಗುತ್ತಿತ್ತು. ಈ ಸಮಸ್ಯೆಯನ್ನು ನಾವು ಬಗೆಹರಿಸಿದ್ದೇವೆ. ಆದರೆ ಈ ಬಗ್ಗೆ ತನಿಖೆ ನಡೆಸಿದಾಗ, ಯಾರೂ ಈ ಮಾಹಿತಿಯನ್ನು ದುರ್ಬಳಕೆ ಮಾಡಿಕೊಂಡಿದ್ದು ತಿಳಿದುಬಂದಿಲ್ಲ ಎಂದು ಟ್ವಿಟರ್‌ ಹೇಳಿದೆ. ಹೀಗಾಗಿ ಬಳಕೆದಾರರು ಪಾಸ್‌ವರ್ಡ್‌ ಬದಲಾವಣೆ ಮಾಡಿಕೊಳ್ಳುವಂತೆ ಸೂಚಿಸಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next