Advertisement

ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ ಚಿತ್ರವನ್ನು ತೆಗೆದುಹಾಕಿದ ಟ್ವಿಟ್ಟರ್:ಕಾರಣವೇನು ಗೊತ್ತಾ?

09:34 AM Jul 02, 2020 | Mithun PG |

ವಾಷಿಂಗ್ಟನ್: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇರ್ ಮಾಡಿದ ಚಿತ್ರವೊಂದನ್ನು ಟ್ವಿಟ್ಟರ್ ತೆಗೆದುಹಾಕಿದೆ.

Advertisement

ಜೂನ್ 30 ರಂದು ಇಮೇಜ್ ಒಂದನ್ನು ಬಳಸಿ ಟ್ರಂಪ್ ಟ್ವಿಟ್ ಮಾಡಿದ್ದರು. ಆದರೇ ಈ ಚಿತ್ರಕ್ಕೆ ಕಾಫಿ ರೈಟ್ (ಹಕ್ಕು ಸ್ವಾಮ್ಯ) ದೂರು ಬಂದ ಹಿನ್ನಲೆಯಲ್ಲಿ ಟ್ವಿಟ್ಟರ್ ಇಂಕ್ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

ಟ್ರಂಪ್ ಟ್ವಿಟ್ ಮಾಡಿದ ಚಿತ್ರವನ್ನು 2015ರಲ್ಲಿ ನ್ಯೂಯಾರ್ಕ್ ಟೈಮ್ಸ್ ಛಾಯಾಚಿತ್ರಗಾರರೊಬ್ಬರು ಆಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ತೆಗೆದಿದ್ದರು. ಕೆಲದಿನಗಳ ಹಿಂದೆಯೂ ಕೂಡ ಟ್ರಂಪ್ ಮಾಡಿದ ಟ್ವೀಟ್ ಒಂದನ್ನು ಟ್ವಿಟ್ಟರ್ ತೆಗೆದುಹಾಕಿತ್ತು.

ಟ್ವಿಟ್ಟರ್ ಈಗಾಗಲೇ ಪೋಸ್ಟ್ ವಿಚಾರದಲ್ಲಿ ಹಲವಾರು ಕಠಿಣ ಮಾರ್ಗಸೂಚಿಗಳನ್ನು ರೂಪಿಸಿದ್ದು ಹಕ್ಕು ಸ್ಮಾಮ್ಯ ಕಂಡುಬಂದರೇ ಅಥವಾ ವರದಿ ಮಾಡಿದರೇ ಕೂಡಲೇ ಅಂತಹ ಟ್ವೀಟ್ ಗಳನ್ನು ರಿಮೂವ್ ಮಾಡುತ್ತದೆ.

ಲುಮೆನ್ ಡೇಟಾಬೇಸ್‌ ನಲ್ಲಿ ಪೋಸ್ಟ್ ಮಾಡಿದ ನೋಟಿಸ್ ಪ್ರಕಾರ, ಫೋಟೋದ ಹಕ್ಕುಗಳನ್ನು ಹೊಂದಿರುವ ನ್ಯೂಯಾರ್ಕ್ ಟೈಮ್ಸ್ ನಿಂದ ಡಿಜಿಟಲ್ ಮಿಲೇನಿಯಮ್ ಕಾಪಿರೈಟ್ ಆಕ್ಟ್ (ಡಿಎಂಸಿಎ) ದೂರನ್ನು ಸ್ವೀಕರಿಸಿದ ನಂತರ ಟ್ವಿಟರ್ ಅದನ್ನು ತೆಗೆದುಹಾಕಿದೆ.

Advertisement

ಟ್ವಿಟ್ಟರ್ ಮೇ ತಿಂಗಳಿನಿಂದ ಟ್ರಂಪ್ ಅವರ ಟ್ವೀಟ್ ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಪ್ರಾರಂಭಿಸಿದ್ದು, ಕೆಲದಿನಗಳ ಹಿಂದೆ ಅಂಚೆ ಮತದಾನದ ಕುರಿತು ತಪ್ಪಾಗಿ ಟ್ವೀಟ್ ಮಾಡಿದ್ದನ್ನು ಕೂಡ ಎತ್ತಿತೋರಿಸಿತ್ತು. ಮಾತ್ರವಲ್ಲದೆ  ಕಪ್ಪು ವರ್ಣಿಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ನಿಧನದ ನಂತರ ಅವರಿಗೆ  ಗೌರವ ಸೂಚಿಸುವ ವೀಡಿಯೊವೊಂದನ್ನು  ಕಳೆದ ತಿಂಗಳು ಟ್ವಿಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ನ ಪ್ಲಾಟ್‌ ಫಾರ್ಮ್‌ಗಳಲ್ಲಿ ಟ್ರಂಪ್ ಪೋಸ್ಟ್ ಮಾಡಿದ್ದರು. ಇದು ಕೂಡ  ಕೃತಿಸ್ವಾಮ್ಯ ದೂರುಗಳಿಂದಾಗಿ ನಿಷ್ಕ್ರಿಯಗೊಂಡಿದ್ದವು. ಆನಂತರದಲ್ಲಿ ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣಗಳ ನಿಯಮವನ್ನು ಬದಲಾಯಿಸುವುದಾಗಿ ಎಚ್ಚರಿಕೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next