Advertisement

ಟ್ವಿಟ್ಟರ್ ‘ವೇರಿಫಿಕೇಶನ್ ಬ್ಯಾಡ್ಜ್’ಪುನರಾರಂಭ; ಯಾರೆಲ್ಲಾ ಅರ್ಹರು ? ಮಾರ್ಗಸೂಚಿಗಳೇನು ?

09:28 AM May 21, 2021 | Team Udayavani |

ನವದೆಹಲಿ: 2017ರ ನಂತರ ಸ್ಥಗಿತಗೊಂಡಿದ್ದ ಟ್ವಿಟ್ಟರ್ ಬ್ಲೂ ಬ್ಯಾಡ್ಜ್ ಆಯ್ಕೆ ಮತ್ತೆ ಪುನಾರಾರಂಭಗೊಂಡಿದೆ. ಮೈಕ್ರೋ ಬ್ಲಾಗಿಂಗ್ ಫ್ಲ್ಯಾಟ್ ಫಾರ್ಮ್ ಗಳಲ್ಲಿ ಒಂದಾದ ಟ್ವಿಟ್ಟರ್ ಪರಿಷ್ಕರಿಸಿದ ನೀತಿಗಳೊಂದಿಗೆ ವೇರಿಫಿಕೇಶನ್ ಬ್ಯಾಡ್ಜ್ ಅನ್ನು ಪರಿಚಯಿಸಿದೆ.

Advertisement

ಈ ಕುರಿತು ಟ್ವಿಟ್ಟರ್ ಸಂಸ್ಥೆ ಆಧೀಕೃತವಾಗಿ ಮಾಹಿತಿ ನೀಡಿದ್ದು, ಮುಂದಿನ ಕೆಲವು ವಾರಗಳಲ್ಲಿ ಹೊಸ ಧೃಡೀಕರಣ ಆಯ್ಕೆಯನ್ನು ಕಲ್ಪಿಸುತ್ತಿದ್ದೇವೆ. ಮಾತ್ರವಲ್ಲದೆ ಸಾಮಾನ್ಯ ಬಳಕೆದಾರರು ಇದರ ಉಪಯೋಗ ಪಡೆದುಕೊಳ್ಳಬಹುದು ಎಂದಿದೆ.

ಟ್ವಿಟ್ಟರ್ ಖಾತೆಯ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಏಕೈಕ ಮಾರ್ಗ ಎಂದರೇ  ಬ್ಲೂ ಟಿಕ್ . ಯಾವುದೇ ಖಾತೆಗಳು ವೇರಿಫೈಡ್ ಅಥವಾ ಪರಿಶೀಲಿಸಲ್ಪಟ್ಟಿದ್ದರೆ, ಅವರ ಹೆಸರಿನ ಮುಂದೆ ಬ್ಲೂ ಟಿಕ್ ಕಾಣಿಸಿಕೊಳ್ಳುತ್ತದೆ. ಇದೀಗ ಜಾರಿಗೆ ಬಂದಿರುವ ಹೊಸ ಬ್ಲೂ ಬ್ಯಾಡ್ಜ್ ಆಯ್ಕೆಗಾಗಿ ಹಲವು ಮಾರ್ಗಸೂಚಿಯನ್ನು ಪಾಲಿಸಬೇಕಾಗುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಇದನ್ನೂ ಓದಿ:  ಜ್ಯೂನಿಯರ್‌ ಎನ್‌ ಟಿಆರ್‌ ಜೊತೆ ಪ್ರಶಾಂತ್ ನೀಲ್ ಸಿನಿಮಾ

Advertisement

ವೇರಿಫೈಡ್ ಬ್ಯಾಡ್ಜ್ ಗಾಗಿ ಅರ್ಜಿ ಸಲ್ಲಿಸುವವರು ಕಳೆದ 12 ತಿಂಗಳಿಂದ ಟ್ವಿಟ್ಟರ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿರಬಾರದು. ಅನಧಿಕೃತ ಫ್ಯಾನ್ ಅಕೌಂಟ್, ಕಮೆಂಟರಿ ಅಕೌಂಟ್, ನ್ಯೂಸ್ ಫೀಡ್, ವಿಡಂಬನಾತ್ಮಕ ಮಾಹಿತಿ ಪೋಸ್ಟ್ ಮಾಡುವ ಅಕೌಂಟ್, ದ್ವೇಷಪೂರಿತ ಮಾಹಿತಿ ನೀಡುವ  ಅಕೌಂಟ್ ಗಳು, ಟ್ವಟ್ಟರ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಅಕೌಂಟ್ ಗಳು  ಬ್ಲೂ ಬ್ಯಾಡ್ಜ್ ಗೆ ಅರ್ಹತೆ ಪಡೆಯುವುದಿಲ್ಲ.

ಮಾತ್ರವಲ್ಲದೆ ಕಳೆದ 6 ತಿಂಗಳಿಂದ ಸಕ್ರಿಯವಾಗಿರದ ಅಕೌಂಟ್ ಗಳು ಬ್ಲೂ ಬ್ಯಾಡ್ಜ್ ಪಡೆಯಲು ಅರ್ಹತೆ ಇರುವುದಿಲ್ಲ. ಪ್ರೊಫೈಲ್ ಹೆಸರು, ಫೋಟೋ, ಇಮೇಲ್ ಮತ್ತು ಪೋನ್ ನಂಬರ್ ಇರದ ಖಾತೆಗಳು ಕೂಡ ಈ ಆಯ್ಕೆಗೆ ಪರಿಗಣಿಸಲ್ಪಡುವುದಿಲ್ಲ.

ಯಾರು ಬ್ಲೂ ಬ್ಯಾಡ್ಜ್ ಪಡೆಯಲು ಅರ್ಹರು ?

ಸರ್ಕಾರ, ಸಂಸ್ಥೆಗಳು, ಸುದ್ದಿಸಂಸ್ಥೆಗಳು, ಪತ್ರಕರ್ತರು, ಸಿನಿಮಾ ಕ್ಷೇತ್ರದಲ್ಲಿರುವವರು, ಕ್ರೀಡಾ ಕ್ಷೇತ್ರದ ಸಾಧಕರು, ಜನಪ್ರಿಯ ವ್ಯಕ್ತಿಗಳು ಮತ್ತು ಇತರೆ

ಇದನ್ನೂ ಓದಿ: ಮರೆಯುವುದಾದರೂ ಹೇಗೆ‌ ಆ ಕರಾಳ ದಿನವನ್ನು…

Advertisement

Udayavani is now on Telegram. Click here to join our channel and stay updated with the latest news.

Next