ನವದೆಹಲಿ:ಸಾಮಾಜಿಕ ಜಾಲತಾಣ ಟ್ವಿಟರ್ ದೇಶದ 2021ರ ಐಟಿ ನಿಯಮಗಳನ್ನು ಪಾಲಿಸುವಲ್ಲಿ ವಿಫಲವಾಗಿದೆ. ಇದರ ಪರಿಣಾಮ ಬಳಕೆದಾರರ ಕಂಟೆಂಟ್ ಮೇಲಿನ ರಕ್ಷಣೆ ಕಳೆದುಕೊಳ್ಳಲು ಕಾರಣವಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ(ಜುಲೈ 05) ದೆಹಲಿ ಹೈಕೋರ್ಟ್ ಗೆ ತಿಳಿಸಿದೆ.
ಇದನ್ನೂ ಓದಿ:ಸೋಮಶೇಖರ್ ನೀನು ಬೇಕಾದರೆ ಯಡಿಯೂರಪ್ಪನವರ ಪಾದ ನೆಕ್ಕು : ಎಚ್. ವಿಶ್ವನಾಥ್
ನೂತನ ಐಟಿ ಕಾಯ್ದೆಯನ್ನು ಪಾಲನೆಯಂತೆ ನಡೆದುಕೊಳ್ಳಲು ಮೂರು ತಿಂಗಳ ಕಾಲಾವಕಾಶ ನೀಡಿದರೂ ಕೂಡಾ ಸಾಮಾಜಿಕ ಜಾಲತಾಣ ಟ್ವಿಟರ್ ಪ್ರಮುಖ ಅಧಿಕಾರಿಗಳನ್ನು ನೇಮಕ ಮಾಡುವಲ್ಲಿ ವಿಫಲವಾಗಿದೆ, ಇದರಿಂದ ಟ್ವಿಟರ್ ಇಂಡಿಯಾ ಈ ನೆಲದ ಕಾನೂನನ್ನು ಉಲ್ಲಂಘಿಸಿದೆ ಎಂದು ಕೋರ್ಟ್ ಗೆ ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.
ಕೇಂದ್ರ ಸರ್ಕಾರದ ನೂತನ ಐಟಿ ನಿಯಮಗಳಡಿ ಸಾಮಾಜಿಕ ಮಾಧ್ಯಮಗಳು ಭಾರತದಲ್ಲಿ ಮಧ್ಯಂತರ ಕುಂದುಕೊರತೆ ಪರಿಹಾರ ಅಧಿಕಾರಿಯನ್ನು ನೇಮಕ ಮಾಡುವುದನ್ನು ಕಡ್ಡಾಯಗೊಳಿಸಿತ್ತು. ಇದರಿಂದ ಕೇಂದ್ರ ಮತ್ತು ಟ್ವಿಟರ್ ನಡುವೆ ಜಟಾಪಟಿ ನಡೆದ ಬೆನ್ನಲ್ಲೇ ಭಾರತದಲ್ಲಿ ಮಧ್ಯಂತರ ಕುಂದುಕೊರತೆ ಪರಿಹಾರ ಅಧಿಕಾರಿಯನ್ನು ನೇಮಕ ಮಾಡಿತ್ತು.
ಸಾಮಾಜಿಕ ಮಾಧ್ಯಮ ಕಂಪನಿಗಳು ಕುಂದುಕೊರತೆ ನಿವಾರಣಾ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬೇಕು ಮತ್ತು ಅವರ ಹೆಸರು, ಫೋನ್ ನಂಬರ್ನ್ನು ತಮ್ಮ ವೆಬ್ಸೈಟ್ ಮೂಲಕ ಪ್ರಚುರಪಡಿಸಬೇಕು. ಬಳಕೆದಾರರಿಗೆ ಸೋಷಿಯಲ್ ಮೀಡಿಯಾ ಸಂಬಂಧಪಟ್ಟು ಉಂಟಾಗುವ ಸಮಸ್ಯೆಗಳನ್ನು ಅವರು ಆಲಿಸಬೇಕು ಎಂದು ಕೇಂದ್ರ ಸರ್ಕಾರ ನೂತನ ಐಟಿ ಕಾಯ್ದೆಯಲ್ಲಿ ತಿಳಿಸಿತ್ತು.