ಅಡಿಲೇಡ್: ಭಾರತ- ಆಸ್ಟ್ರೇಲಿಯಾ ನಡುವಿನ ಮೊದಲ ಪಿಂಕ್ ಬಾಲ್ ಡೇ- ನೈಟ್ ಟೆಸ್ಟ್ ಪಂದ್ಯ ಆರಂಭವಾಗಿದೆ. ಆದರೇ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ಮುಂದಾದ ನಾಯಕ ಕೊಹ್ಲಿ ನಿರ್ಧಾರ ಆರಂಭದಲ್ಲೇ ತಲೆಕೆಳಗಾಗಿದೆ.
ಆರಂಭಿಕನಾಗಿ ಕಣಕ್ಕಿಳಿದ ಪೃಥ್ವಿ ಶಾ ಶೂನ್ಯಕ್ಕೆ ನಿರ್ಗಮಿಸಿ ಕ್ರಿಕೆಟ್ ಪ್ರೇಮಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಕೇವಲ ಎರಡು ಎಸೆತ ಎದುರಿಸಿದ ಶಾ, ಸ್ಟಾರ್ಕ್ ಬೌಲಿಂಗ್ ನಲ್ಲಿ ಡಕ್ ಔಟ್ ಆಗಿ ನಿರಾಸೆ ಮೂಡಿಸಿದರು.
ಇದಕ್ಕೂ ಮೊದಲು ಟೀಂ ಇಂಡಿಯಾದಲ್ಲಿ ಆರಂಭಿಕರಾಗಿ ಕಣಕ್ಕಿಳಿಯುವವರು ಯಾರು ಎಂಬುದರ ಬಗ್ಗೆ ಸಾಕಷ್ಟು ಚರ್ಚೆಗಳಾಗಿದ್ದವು. ಹಲವು ದಿಗ್ಗಜರು ಮಾಯಾಂಕ್ ಅಗರ್ವಾಲ್ ಮತ್ತು ಶುಭ್ ಮನ್ ಗಿಲ್ ಓಪನಿಂಗ್ಸ್ ನಲ್ಲಿ ಆಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೇ ಅಚ್ಚರಿಯ ಬೆಳವಣಿಗೆಯಲ್ಲಿ ಪ್ಲೇಯಿಂಗ್ ಇಲವೆನ್ ನಲ್ಲಿ ಕಾಣಿಸಿಕೊಂಡ ಶಾ, ಆರಂಭಿಕರಾಗಿ ಕಣಕ್ಕಿಳಿಯುವ ಅವಕಾಶ ಪಡೆದಿದ್ದರು.
Related Articles
ಆದರೇ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಲೈನ್ ಅಂಡ್ ಲೆಂಥ್ ಬೌಲಿಂಗ್ ಅನ್ನು ಗುರುತಿಸುವಲ್ಲಿ ಎಡವಿದ ಶಾ, ಕ್ಲೀನ್ ಬೌಲ್ಡ್ ಆಗಿದ್ದರು. ಆ ಮೂಲಕ ಮೊದಲ ಓವರ್ ನಲ್ಲೇ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.
ಕೆ. ಎಲ್ ರಾಹುಲ್ ಹಾಗೂ ಪ್ರತಿಭಾವಂತ ಶುಭಮನ್ ಗಿಲ್ ಗೆ ಅವಕಾಶ ನೀಡದೆ ಪೃಥ್ವಿ ಶಾನನ್ನು ಆಯ್ಕೆ ಮಾಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಇದಕ್ಕೆ ಮತ್ತಷ್ಟು ಪುಷ್ಠಿ ನೀಡುವಂತೆ ಕೇವಲ ಎರಡು ಎಸೆತ ಎದುರಿಸಿ ನಿರ್ಗಮಿಸಿದ ಶಾ, ವ್ಯಾಪಕ ಟ್ರೋಲ್ ಗೆ ಒಳಗಾಗುತ್ತಿದ್ದಾರೆ.