Advertisement

ಸರ್ಕಾರದ ಆದೇಶ : 100 ಕ್ಕೂ ಅಧಿಕ ಪೋಸ್ಟ್ ಗಳನ್ನು ಅಳಿಸಿದ ಎಫ್ ಬಿ, ಟ್ವೀಟರ್

05:18 PM Apr 25, 2021 | Team Udayavani |

ನವ ದೆಹಲಿ : ಪ್ರಸ್ತುತ ಕೋವಿಡ್ ವೈದ್ಯಕೀಯ ಬಿಕ್ಕಟ್ಟನ್ನು ನಿಭಾಯಿಸಲು ಅಥವಾ ಕೋವಿಡ್ ಸಾಂಕ್ರಾಮಿಕ ಸೋಂಕಿನ ಸುತ್ತ ನಕಲಿ ಸುದ್ದಿಗಳನ್ನು ಹರಡುವ ಉದ್ದೇಶದಿಂದ ಕೇಂದ್ರವನ್ನು ಟೀಕಿಸುವ ವಿಷಯವನ್ನು ತೆಗೆದುಹಾಕುವಂತೆ ಸರ್ಕಾರ ಆದೇಶದ ನಂತರ ಟ್ವಿಟರ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳು ಸುಮಾರು 100 ಪೋಸ್ಟ್‌ ಗಳು ಮತ್ತು ಯು ಆರ್‌ ಎಲ್‌ ಗಳನ್ನು ತೆಗೆದುಹಾಕಿದೆ ಎಂದು ಪಿಟಿಐ ವರದಿ ಮಾಡಿದೆ.

Advertisement

ಭಾರತ ಸರ್ಕಾರದ ಕಾನೂನು ಕೋರಿಕೆಗೆ ಪ್ರತಿಕ್ರಿಯೆಯಾಗಿ ತನ್ನ ಕ್ರಮವನ್ನು ಖಾತೆದಾರರಿಗೆ ತಿಳಿಸಿದೆ ಎಂದು ಟ್ವಿಟರ್ ಹೇಳಿದೆ, ಆದರೆ ಈ ವಿಷಯದ ಬಗ್ಗೆ ಫೇಸ್‌ ಬುಕ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕಂಪನಿಗಳು ಆದೇಶವನ್ನು ಪಾಲಿಸಿವೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ತೆಗೆದುಹಾಕಲಾದ ಪೋಸ್ಟ್‌ಗಳು ಯಾವುವು ಎಂಬುದು ಇದುವರೆಗೆ ತಿಳಿದು ಬಂದಿಲ್ಲ.

ಓದಿ :ಸೆಮಿ ಲಾಕ್‌ಡೌನ್‌ಗೆ ಉತ್ತಮ ಪ್ರತಿಕ್ರಿಯೆ 

ಏತನ್ಮಧ್ಯೆ, ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಗೃಹ ಸಚಿವಾಲಯದ ಶಿಫಾರಸ್ಸಿನ ಮೇರೆಗೆ “ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಅಡೆತಡೆಗಳನ್ನು ತಡೆಗಟ್ಟಲು” ಮತ್ತು ಸಾರ್ವಜನಿಕರಿಗೆ ಸುಳ್ಳು ಸುದ್ದಿಗಳನ್ನು ಹರಡುವ ಉದ್ದೇಶಿತ ಪೋಸ್ಟ್‌ ಗಳು ಮತ್ತು ಯು ಆರ್‌ ಎಲ್‌ ಗಳನ್ನು  ತೆಗೆದುಹಾಕುವಂತೆ ಸಾಮಾಜಿಕ ಮಾಧ್ಯಮಗಳನ್ನು ಕೇಳಿದೆ ಎಂದು ವರದಿಯಾಗಿದೆ.

Advertisement

“ಸಂಬಂಧವಿಲ್ಲದ, ಹಳೆಯ ಮತ್ತು ಸಂದರ್ಭದ ಚಿತ್ರಗಳು ಅಥವಾ ದೃಶ್ಯಗಳನ್ನು ಬಳಸುವುದರ ಮೂಲಕ, ಕೋಮುವಾದಿ ಸೂಕ್ಷ್ಮ ಪೋಸ್ಟ್‌ಗಳು ಮತ್ತು ಕೋವಿಡ್ 19 ಪ್ರೋಟೋಕಾಲ್‌ ಗಳ ಬಗ್ಗೆ ತಪ್ಪು ಮಾಹಿತಿಯನ್ನು ಹರಡುತ್ತಿರುವ ಕಾರಣದಿಂದ  ಎಂತಹ ಸುದ್ದಿಗಳನ್ನು ತೆಗೆದು ಹಾಕುವಂತೆ ಆದೇಶಿಸಲಾಗಿದೆ.

ಇನ್ನು, ಈ ವರ್ಷದ ಆರಂಭದಲ್ಲಿ, ರೈತರ ಪ್ರತಿಭಟನೆಗೆ ಸಂಬಂಧಿಸಿದ ತಪ್ಪು ಮಾಹಿತಿ ಮತ್ತು ಪ್ರಚೋಧನಕಾರಿ ವಿಷಯಗಳ ಹರಡುವಿಕೆಯನ್ನು ತಡೆಯಲು ಮೈಕ್ರೋಬ್ಲಾಗಿಂಗ್ ಪ್ಲಾಟ್‌ ಫಾರ್ಮ್‌ಗೆ ಸರ್ಕಾರ ಆದೇಶಿಸಿದ ನಂತರ 500 ಕ್ಕೂ ಹೆಚ್ಚು ಖಾತೆಗಳನ್ನು ಅಮಾನತುಗೊಳಿಸಲಾಗಿತ್ತು.

ಓದಿ : ಕೋವಿಡ್‌ ಲಸಿಕೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿ

Advertisement

Udayavani is now on Telegram. Click here to join our channel and stay updated with the latest news.

Next