ಕರ್ನಾಟಕ ಮತ್ತು ಕೇರಳ ರಾಜ್ಯಗಳು ತುಳು ಭಾಷೆಗೆ ರಾಜ್ಯ ಮಾನ್ಯತೆ ನೀಡಬೇಕು ಎಂಬ ಹಿನ್ನೆಲೆಯಲ್ಲಿ ಅಭಿಯಾನ ನಡೆದಿದೆ. ಶಾಸಕರಾದ ಎಸ್. ಅಂಗಾರ, ಡಿ. ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಯು. ರಾಜೇಶ್ ನಾೖಕ್, ಡಾ| ವೈ. ಭರತ್ ಶೆಟ್ಟಿ, ಹರೀಶ್ ಪೂಂಜಾ ಅವರು ಟ್ವೀಟಿಸಿದ್ದಾರೆ. ಅಲ್ಲದೆ ತುಳು ಲಿಪಿಯನ್ನು ಟ್ವೀಟರ್‌ನಲ್ಲಿ ಪ್ರಕಟಿಸಿದ್ದಾರೆ.
ತುಳುವಿಗೆ ಮಾನ್ಯತೆ ನೀಡಲು ರಾಜ್ಯ ಸರಕಾರ ಮಾತ್ರವಲ್ಲದೆ ಕೇರಳ ರಾಜ್ಯ ಸರಕಾರವನ್ನೂ ಈ ಅಭಿಯಾನದ ಮೂಲಕ ಒತ್ತಾಯಿಸಲಾಗಿದೆ. ರಾತ್ರಿಯ ಹೊತ್ತಿಗೆ ಸುಮಾರು 34 ಸಾವಿರ ಟ್ವೀಟ್‌ಗಳಾಗಿವೆ. ಟ್ವೀಟ್ ಅಭಿಯಾನಕ್ಕೆ ತುಳು ಭಾಷಿಗರು, ತುಳು ಭಾಷಾ ಪ್ರೇಮಿಗಳಲ್ಲದೆ ಅನಿವಾಸಿ ಭಾರತೀಯರೂ ಕೈಜೋಡಿಸಿದ್ದಾರೆ. ಟ್ವೀಟ್‌ಗಳಲ್ಲಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವ ಸದಾನಂದ ಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ ಮತ್ತು ಇತರ ಜನಪ್ರತಿನಿಧಿಗಳನ್ನು ಟ್ಯಾಗ್ ಮಾಡಲಾಗಿದೆ.
Advertisement