ನವ ದೆಹಲಿ : ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಹಾಗೂ ಪಕ್ಷದ ಪ್ರಮುಖ ನಾಯಕರ ಟ್ವೀಟರ್ ಅಧಿಕೃತ ಟ್ವೀಟರ್ ಖಾತೆಯನ್ನು ಬ್ಲಾಕ್ ಮಾಡಿರುವ ಕಾರಣಕ್ಕೆ ಟ್ವೀಟರ್ ಹಾಗೂ ಕೇಂದ್ರ ಸರ್ಕಾರದ ಮೇಲೆ ಮತ್ತೆ ರಾಹುಲ್ ಗಾಂಧಿ ಸಿಡಿಮಿಡಿಗೊಂಡಿದ್ದಾರೆ.
ಈ ಬಗ್ಗೆ ವೀಡಿಯೊ ಮೂಲಕ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ನನ್ನ ಟ್ವೀಟರ್ ಖಾತೆಯನ್ನು ಬ್ಲಾಕ್ ಮಾಡುವುದರ ಮೂಲಕ ಟ್ವೀಟರ್ ಸಂಸ್ಥೆ ರಾಜಕೀಯ ಹಸ್ತಕ್ಷೇಪ ಮಾಡಿದೆ. ಇದು ಪ್ರಜಾಪ್ರಭುತ್ವದ ಮೇಲೆ ಮಾಡಿದ ದಾಳಿ ಎಂದು ಅವರು ಗುಡುಗಿದ್ದಾರೆ.
ಇದನ್ನೂ ಓದಿ : ಬೇರೆ ಯೋಚನೆ ಮಾಡಬೇಕಾದೀತು: ಸರ್ಕಾರಕ್ಕೆ ಪರೋಕ್ಷ ಎಚ್ಚರಿಕೆ ರವಾನಿಸಿದ ಎಂ.ಪಿ.ಕುಮಾರಸ್ವಾಮಿ
ಪ್ರಭಾಪ್ರಭುತ್ವದ ರಚನೆಯ ಮೇಲೆ ಇದು ವ್ಯವಸ್ಥಿತಿ ದಾಳಿ. ಇದು ರಾಹುಲ್ ಗಾಂಧಿ ಒಬ್ಬನ ಮೇಲೆ ಮಾತ್ರ ಮಾಡಿದ ದಾಳಿ ಅಲ್ಲ. ನನಗೆ ಟ್ವೀಟರ್ ನಲ್ಲಿ 19-20 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಅವರೆಲ್ಲರ ಧ್ವನಿ ಅಡಗಿಸುವ ಒಂದು ರೀತಿಯ ಪೂರ್ವ ಸಿದ್ಧತೆ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ದೆಹಲಿಯಲ್ಲಿ ದಲಿತ ಅಪ್ರಾಪ್ತೆಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರೊಂದಿಗೆ ತೆಗೆಸಿಕೊಂಡ ಫೋಟೊವನ್ನು ರಾಹುಲ್ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು, ಈ ಬೆನ್ನಿಗೆ ರಾಹುಲ್ ಗಾಂಧಿ ಟ್ವೀಟರ್ ಖಾತೆಯನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಲಾಗಿತ್ತು.
ಇನ್ನು, ಟ್ವೀಟರ್ ಇಂಡಿಯಾ ಸಂಸ್ಥೆ, ತನ್ನ ಪಾಲಿಸಿಗೆ ವಿರುದ್ಧವಾಗಿರುವುದರಿಂದ ಬ್ಲಾಕ್ ಮಾಡಲಾಗಿದೆ. ಆ ಪೋಸ್ಟ್ ನನ್ನು ತೆಗೆಯುವಂತೆ ಸೂಚಿಸಲಾಗಿದೆ. ಆ ಪೋಸ್ಟ್ ತೆಗೆದ ಮೇಲೆ ಖಾತೆಗೆ ಮರು ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದೆ.
ಇದನ್ನೂ ಓದಿ : ಮುಂಬೈನಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕಿಗೆ ಮೊದಲ ಬಲಿ..!