ಚಂಡಿಗಢ: ಖಲಿಸ್ತಾನಿ ಪ್ರತ್ಯೇಕವಾದಿ ನಾಯಕ ಅಮೃತ್‌ಪಾಲ್ ಸಿಂಗ್ ಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಈ ನಡುವೆ ಪಂಜಾಬಿ ಭಾಷೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಹೊಂದಿರುವ ಬಿಬಿಸಿ ಪಂಜಾಬಿ ವಾಹಿನಿಯ ಟ್ವಿಟರ್ ಖಾತೆಗೆ ಭಾರತದಲ್ಲಿ ತಡೆ ನೀಡಲಾಗಿರುವ ಕುರಿತು ವರದಿಯಾಗಿದೆ.
ಅಮೃತ್‌ಪಾಲ್ ಸಿಂಗ್ ನಾನಾ ಕಡೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ತನಿಖೆಗೆ ಸಹಕಾರಿಯಾಗಿ, ಕಾನೂನಿನ ಬೇಡಿಕೆಗೆ ಪ್ರತಿಕ್ರಿಯೆಯಾಗಿ ಬಿಬಿಸಿ ಪಂಜಾಬಿ ಟ್ವಟಿರ್ ಖಾತೆಗೆ ಭಾರತದಲ್ಲಿ ತಡೆ ನೀಡಲಾಗಿದೆ ಎನ್ನಲಾಗಿದೆ. ಆದರೆ ಇದರ ಹಿಂದಿನ ಸ್ಪಷ್ಟ ಕಾರಣ ಇನ್ನು ತಿಳಿದು ಬಂದಿಲ್ಲ.
ಇದನ್ನು ಓದಿ: ಉಮೇಶ್ ಪಾಲ್ ಪ್ರಕರಣ: ಅತೀಖ್ ಅಹಮದ್ ಗೆ ಜೀವಾವಧಿ ಶಿಕ್ಷೆ ಘೋಷಣೆ
ಕಳೆದ ವಾರ ಕೆಲ ಪಂಜಾಬಿ ಪತ್ರಕರ್ತರ, ಸಿಖ್ ಸಮುದಾಯದ ಪ್ರಮುಖ ಮುಖಂಡರ ಟ್ವಟಿರ್ ಖಾತೆ ತಡೆ ಹಿಡಿಯಲಾಗಿತ್ತು.
ಈಗಾಗಲೇ ಈ ಪ್ರಕರಣದಲ್ಲಿ ಪಂಜಾಬ್ ಪೊಲೀಸರು ತೀವ್ರಗಾಮಿ ಸಂಘಟನೆ ವಾರಿಸ್ ಡಿ ಪಂಜಾಬ್‌ನ ಮುಖ್ಯಸ್ಥ ಅಮೃತಪಾಲ್ ಸಿಂಗ್ ಅವರ ಹಲವಾರು ಬೆಂಬಲಿಗರನ್ನು ಬಂಧಿಸಿದ್ದಾರೆ.