ಹೊಸದಿಲ್ಲಿ: ಏರ್ ಇಂಡಿಯಾ ವಿಮಾನದಲ್ಲಿ ಸಹ ಪ್ರಯಾಣಿಕ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ದೇಶದ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಬಂಧಿತನಾಗಿದ್ದ ಶಂಕರ್ ಮಿಶ್ರಾ ಇಂದು ದೆಹಲಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದು, ‘ವಿಮಾನದಲ್ಲಿ ತಾನು ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಲ್ಲ, ಬದಲಾಗಿ ಸ್ವತಃ ಮಹಿಳೆಯೇ ಈ ರೀತಿ ಮಾಡಿಕೊಂಡಿದ್ದರು” ಎಂದಿದ್ದಾನೆ.
ವಿಚಾರಣೆ ವೇಳೆ ಮಿಶ್ರಾ ವಿರುದ್ಧ ದೂರು ನೀಡಿರುವ ಮಹಿಳೆಯು ಆರೋಪಿಯ ಆಪ್ತರಿಂದ ತನಗೆ ಬೆದರಿಕೆ ಬರುತ್ತಿದೆ ಎಂದು ಹೇಳಿದ್ದಾರೆ.
“ನಾನು ನಿಯಮಿತವಾಗಿ ಮೆಸೇಜ್ ಗಳನ್ನು ಸ್ವೀಕರಿಸುತ್ತಿದ್ದೇನೆ, ನನಗೆ ಬೆದರಿಕೆ ಹಾಕುತ್ತಿದ್ದಾರೆ. ಆರೋಪಿಯ ತಂದೆ ನನಗೆ ಮೆಸೇಜ್ ಕಳುಹಿಸಿದ್ದಾರೆ. ಅವರು ನನಗೆ ಸಂದೇಶಗಳನ್ನು ಕಳುಹಿಸಿ ಅವುಗಳನ್ನು ಅಳಿಸುತ್ತಿದ್ದಾರೆ. ಇದು ನಿಲ್ಲಬೇಕು,” ಎಂದು ಕೋರ್ಟ್ ನಲ್ಲಿ ಹೇಳಿದರು.
ಇದನ್ನೂ ಓದಿ:ಕೊನೆಗೂ ಸ್ಯಾಂಟ್ರೋ ರವಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು
ನವೆಂಬರ್ 26 ರಂದು ನ್ಯೂಯಾರ್ಕ್ ನಿಂದ ಹೊಸದೆಹಲಿಗೆ ಪ್ರಯಾಣಿಸುತ್ತಿದ್ದಾಗ ಮಿಶ್ರಾ ಕುಡಿದು ತನ್ನ ಪ್ಯಾಂಟ್ ಅನ್ನು ಬಿಚ್ಚಿ ಬಿಸಿನೆಸ್ ಕ್ಲಾಸ್‌ನಲ್ಲಿ ಕುಳಿತಿದ್ದ 72 ವರ್ಷದ ಮಹಿಳೆಯ ಮೇಲೆ ಮೂತ್ರ ವಿಸರ್ಜಿಸಿದ್ದರು ಎಂದು ಆರೋಪಿಸಲಾಗಿದೆ. ಕಳೆದ ವಾರ ಆತನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು.